ಬೆಳ್ತಂಗಡಿ: ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಫೆ.8 ರಂದು ಬೆಳ್ತಂಗಡಿಗೆ ಭೇಟಿ ನೀಡಿಲಿದ್ದಾರೆ.
ಬೆಳಿಗ್ಗೆ 9.30ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಜನೌಷಧಿ ಕೇಂದ್ರ ಉದ್ಘಾಟನೆ, ಬೆಳಿಗ್ಗೆ10.30 ಅಟ್ರಿಂಜೆ – ಸುಲ್ಕೇರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಅಟ್ರಿಂಜೆ – ಸುಲ್ಕೇರಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ , ಬೆಳಿಗ್ಗೆ 11.00 ಶ್ರೀ ರಾಮ ಶಾಲೆ ಸುಲ್ಕೇರಿ, ಮಧ್ಯಾಹ್ನ 12.00 ಬೆಳ್ತಂಗಡಿ ಬಿಜೆಪಿ ಕಚೇರಿ ( ಕಾರ್ಯಕರ್ತರು ಮತ್ತು ಸಾರ್ವಜನಿಕರು ತಮ್ಮ ಅಹವಾಲನ್ನು ತರಬಹುದು), 3.00 ಗಂಟೆಗೆ ಯಕ್ಷಭಾರತಿ ಬೆಳ್ತಂಗಡಿ ದಶಮಾನೋತ್ಸವ ಮತ್ತು ಭಾರತ ಮಾತಾ ಪೂಜನ ಕಾರ್ಯಕ್ರಮ ಉಜಿರೆ, ಸಂಜೆ 4.00 ಅಗ್ರಿಲೀಫ್ 2.0 ವಿಸ್ತೃತ ಘಟಕದ ಉದ್ಘಾಟನಾ ಕಾರ್ಯಕ್ರಮ ನಿಡ್ಲೆ, 5.30 ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಕಾರ್ಯಕ್ರಮ ಭಾಗಿಯಾಗಲಿದ್ದಾರೆ.