35.5 C
ಪುತ್ತೂರು, ಬೆಳ್ತಂಗಡಿ
February 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆದ್ರಬೆಟ್ಟು ಶ್ರೀ ಮಹಮ್ಮಾಯಿ ಮಾರಿಗುಡಿ ಪುನರ್‌ಪ್ರತಿಷ್ಠಾ ಮಹೋತ್ಸವ ಹಾಗೂ ದೊಂಪದ ಬಲಿ ಉತ್ಸವ: ಧ್ವಜಾರೋಹಣ, ಕಾರ್ಯಾಲಯ ಉದ್ಘಾಟನೆ, ಉಗ್ರಾಣ ಉದ್ಘಾಟನೆಹೊರೆಕಾಣಿಕೆ ಸಮರ್ಪಣೆ

ಬೆದ್ರಬೆಟ್ಟು: ಶ್ರೀ ಮಹಮ್ಮಾಯಿ ಮಾರಿಗುಡಿ ಬೆದ್ರಬೆಟ್ಟು ಮಹಮ್ಮಾಯಿ ನಗರ (ಮಾಸ್ತಿಕಲ್ಲು) ಬಂಗಾಡಿ ಇದರ ಪುನರ್‌ಪ್ರತಿಷ್ಠಾ ಮಹೋತ್ಸವ ಹಾಗೂ ದೊಂಪದ ಬಲಿ ಉತ್ಸವವು ಇಂದಬೆಟ್ಟು ಶ್ರೀ ಅನಂತರಾಮ ಉಪಾಧ್ಯಾಯ ಇವರ ಪೌರೋಹಿತ್ಯದಲ್ಲಿ ಫೆ. 6, 7 ಮತ್ತು9 ರಂದು ನಡೆಯಲಿದೆ.


ಫೆ.6 ರಂದು ಬೆಳಿಗ್ಗೆ ಧ್ವಜಾರೋಹಣ, ಕಾರ್ಯಾಲಯ ಉದ್ಘಾಟನೆ, ಅನ್ನಛತ್ರ ಉದ್ಘಾಟನೆ ನಡೆಯಿತು. ಸಂಜೆ ನಡ, ಕನ್ಯಾಡಿ, ನಾವೂರು, ಇಂದಬೆಟ್ಟು , ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ ಗ್ರಾಮಸ್ಥರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ನಂತರ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ವಾಸ್ತು ಪೂಜಾ ಬಲಿ, ರಾಕ್ಷೋಘ್ನ ಹೋಮ ಪ್ರಕಾರ ಬಲಿ, ಅದಿವಾಸ, ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಸಂಜೆ ನಡೆದ ಉಗ್ರಾಣ ಉದ್ಘಾಟನೆಯಲ್ಲಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರಮೋದ್ ಕುಮಾರ್ ಬೆದ್ರಬೆಟ್ಟು , ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಹಾಗೂ ಸದಸ್ಯರು, ವಿವಿಧ ಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್, ನಾವೂರು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಗಣೇಶ್ ಗೌಡ, ದಾಸಪ್ಪ ಗೌಡ ಕಾಂಜಾನು ಕೊಲ್ಲಿ, ಪ್ರದೀಪ್ ಕುಮಾರ್ ನಾಗಾಜೆ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related posts

ಬಾಂಗ್ಲಾ ಹಿಂದು ಗಳಿಗಾಗಿರುವ ದೌರ್ಜನ್ಯದ ವಿರುದ್ಧ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮಾನವ ಸರಪಳಿ ಮೂಲಕ ಪ್ರತಿಭಟನೆ

Suddi Udaya

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya

ಧರೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ಸು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೃತ್ಯು

Suddi Udaya

ಬೆಳ್ತಂಗಡಿ ಸಂಜಯ್ ಗ್ಲೋಬಲ್ ಫೌಂಡೇಶನ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಹಾಗೂ ಪದವಿಪೂರ್ವ ಕಾಲೇಜು ಜಂಟಿಯಾಗಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!