ಬೆಳ್ತಂಗಡಿ: ಸಂಸದ ಕ್ಯಾ ಬ್ರಿಜೇಶ್ ಚೌಟರವರು ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿಯವರ ಮನೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶರತ್ ಶೆಟ್ಟಿಯವರ ಮಾತ ಪಿತರಾದ ವಿಜಯ್ ಶೆಟ್ಟಿ ಮತ್ತು ಹೇಮಾವತಿ, ಮನೆಯವರಾದ ಸೌಮ್ಯ, ರೂಪಾ, ವಿದ್ಯಾರವರು ಸಂಸದರನ್ನು ಗೌರವಿಸಿ, ಸತ್ಕರಿಸಿದರು.
ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್,ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ,ಬಿಜೆಪಿ ಯುವ ಮೋರ್ಚಾ ಪ್ರಮುಖರಾದ ಉಮೇಶ್ ಕುಲಾಲ್,ಸಂಕೇತ್ ಶೆಟ್ಟಿ, ಪ್ರಕಾಶ್ ಆಚಾರ್ಯ,ಲಾಯಿಲ ಗ್ರಾ.ಪಂ ಸದಸ್ಯರಾದ ಅರವಿಂದ್,ಗಣೇಶ್,ಮೇಲಂತಬೆಟ್ಟು ಪಂಚಾಯತ್ ಸದಸ್ಯ ಚಂದ್ರರಾಜ್ ಉಪಸ್ಥಿತರಿದ್ದರು.