30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

ಅಳದಂಗಡಿ : ಗಣಪತಿ ಸಾನಿಧ್ಯವುಳ್ಳ ಕಾರಣಿಕ ಕ್ಷೇತ್ರವಾಗಿರುವ ತಾಲೂಕಿನ ಎರಡನೇ ದೇವಸ್ಥಾನವಾದ ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಎರಡನೇ ವರ್ಷದ ಪ್ರತಿಷ್ಠಾ ವರ್ಧಂತಿ ಫೆ. 7 ರಂದು ವಿಜೃಂಭಣೆಯಿದ ನೆರವೇರಿತು.


ಪೊಳಲಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ತಂತ್ರಿವರ್ಯತ್ವದಲ್ಲಿ, ಪ್ರಧಾನ ಅರ್ಚಕ ಸೋಮನಾಥ ಮಯ್ಯ ಅವರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಮಹಾಗಣಪತಿಗೆ 12 ತೆಂಗಿನಕಾಯಿ ಗಣಹವನ, 25 ಕಲಶಾಭಿಷೇಕ, ಹವನ, ಪ್ರಸನ್ನ ಪೂಜೆ, ಅಪ್ಪ, ಪಂಚಕಜ್ಜಾಯ, ಮಹಾಮಂಗಳಾರತಿ ಸೇವೆಗಳು ನಡೆದವು. ಮಧ್ಯಾಹ್ನ ಭೋಜನ ಪ್ರಸಾದವನ್ನು ನೂರಾರು ಭಕ್ತರು ಸ್ವೀಕರಿಸಿದರು.

ಸಂಜೆ ಶ್ರೀರಂಗ ಪೂಜೆಯು ಸಂಪನ್ನಗೊಂಡಿತು. ಬಳಿಕ ದೇವರ ಬಲಿ ಉತ್ಸವ ಚೆಂಡೆ, ವಾದ್ಯ, ಕೊಂಬು ಇತ್ಯಾದಿ ವಾದನಗಳೊಂದಿಗೆ ನೆರವೇರಿತು. ಉತ್ಸವದ ಸಂದರ್ಭ ಸಾವಿರಾರು ಭಕ್ತ ಬಂಧುಗಳು ಪಾಲ್ಗೊಂಡಿದ್ದರು.
ಸನಿಹದ ಶ್ರೀ ಸೋಮನಾಥೇಶ್ವರೀ ದೇವಿಗೆ ಜನವರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಶ್ರೀ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ ಹೊಂದಿದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಹಿಂದೆ ಅವರ ಇಚ್ಛೆಯಂತೆ ಗಣಪತಿ ದೇವರ ಆಕರ್ಷಕ ನೂತನ ಮೂರ್ತಿಯನ್ನು ಸಿದ್ಧಪಡಿಸಿ ಪ್ರತಿಷ್ಠಾಪಿಸಲಾಗಿತ್ತು.


ಅರ್ಚಕ ಪ್ರವೀಣ ಮಯ್ಯ, ಪ್ರಕಾಶ ಹೊಳ್ಳ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು. ಆಡಳಿತಾಧಿಕಾರಿ ಅಳದಂಗಡಿಯ ಪಶುವೈದ್ಯ ಪರಿವೀಕ್ಷಕ ರಮೇಶ್ ಉಪಸ್ಥಿತರಿದ್ದರು.

Related posts

ಆಂಧ್ರಪ್ರದೇಶದಲ್ಲಿ ನಡೆಯುವ, ದಕ್ಷಿಣ ಭಾರತದ ವಿಜ್ಞಾನ ಮೇಳ: ಬೆಳ್ತಂಗಡಿ ಎಸ್. ಡಿ. ಎಂ ಶಾಲಾ ವಿದ್ಯಾರ್ಥಿ ಅಧಿಶ್ ಬಿ.ಸಿ ಆಯ್ಕೆ

Suddi Udaya

ಬೆಳ್ತಂಗಡಿ: ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ: ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ

Suddi Udaya

ಮಿತ್ತಬಾಗಿಲು : ಕಿಲ್ಲೂರುನಲ್ಲಿ ನಿರ್ಮಾಣಗೊಳ್ಳಲಿರುವ ರಿಕ್ಷಾ ತಂಗುದಾಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya

ರೋಟರಿ ಕ್ಲಬ್ ನಿಂದ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ರೂ.42 ಲಕ್ಷ ವೆಚ್ಚದ 4 ಡಯಾಲಿಸಿಸ್ ಯಂತ್ರಗಳು: 7 ಸಾವಿರ ಲೀಟರ್ ಸಾಮರ್ಥ್ಯದ ಆರ್.ಒ ಪ್ಲಾಂಟ್ ಹಸ್ತಾಂತರ

Suddi Udaya

ಜ 29 :ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬೃಹತ್ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ: ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪೂರ್ವಭಾವಿ ಸಭೆ

Suddi Udaya
error: Content is protected !!