ಉಜಿರೆ: ಯಕ್ಷಭಾರತಿ ಕನ್ಯಾಡಿ ಇದರ ದಶಮಾನೋತ್ಸವ ಸಭಾ ಸಮಾರಂಭ ಹಾಗೂ ಭಾರತ ಮಾತಾ ಪೂಜನ ಕಾರ್ಯಕ್ರಮವು ಫೆ.8ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾ ಮಂಟಪದಲ್ಲಿ ಜರುಗಿತು.
![](https://suddiudaya.com/wp-content/uploads/2025/02/20250208_191334-1024x461.jpg)
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರಶರತ್‌ಕೃಷ್ಣ ಪಡುವೆಟ್ನಾಯ ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಖ್ಯಾತ ವಾಗ್ಮಿ ಮತ್ತು ಅಂಕಣಕಾರರಾದ ಪ್ರಕಾಶ್ ಮಲ್ಪೆದಿಕ್ಸುಚಿ ಭಾಷಣವನ್ನು ಮಾಡಿದರು.ಮುಖ್ಯ ಅಭ್ಯಾಗತರಾದ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಪೆರ್ಲ ಇದರ ಸ್ಥಾಪಕರಾದ ಸಬ್ಬಣಕೋಡಿ ರಾಮ ಭಟ್ ರವರಿಗೆ ಯಕ್ಷಭಾರತಿ ಪ್ರಶಸ್ತಿ, ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ದಶಮಾನೋತ್ಸವ ಯುವ ಸಾಧನಾ ಪುರಸ್ಕಾರ, ಶೌರ್ಯ ವಿಪತ್ತು ನಿರ್ವಹಣಾ ತಂಡ ಎಸ್. ಕೆ.ಡಿ.ಆರ್.ಡಿ. ಪಿ., ಧರ್ಮಸ್ಥಳಕ್ಕೆ ದಶಮಾನೋತ್ಸವ ಸೇವಾ ತಂಡ ಗೌರವ, ನಿವೃತ್ತ ಆರೋಗ್ಯ ಸಹಾಯಕಿಯರಾದ ಶ್ರೀಮತಿ ಭುವನೇಶ್ವರಿ ಕುಂಠಿನಿ ಮತ್ತು ದೇವಮ್ಮ ರವರಿಗೆ ಯಕ್ಷಭಾರತಿ ಸೇವಾ ಗೌರವ, ಕು. ರಾವ್ ರವರಿಗೆ ಸನ್ಮಾನ, ಅಭಿಜಿತ್ ಮತ್ತು ಮೋನಿಷಾ ರವರಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
![](https://suddiudaya.com/wp-content/uploads/2025/02/20250208_191026-1024x461.jpg)
ಬಳಿಕ ಸಬ್ಬಣ್ಣಕೋಡಿ ರಾಮ ಭಟ್ಟರ ಶಿಷ್ಯವೃಂದದವರಿಂದ ವೀರ ಬಬ್ರುವಾಹನ ಹಾಗೂ ಪ್ರಸಿದ್ಧ ಕಲಾವಿದರಿಂದ ದೇವ ದರ್ಶನ ಯಕ್ಷಗಾನ ಪ್ರದರ್ಶನ ನಡೆಯಿತು.
ಶ್ರೀನಿವಾಸ್ ರಾವ್ ಕಲ್ಮ0ಜ ವಂದೇ ಮಾತರಂ ಹಾಡಿದರು. ಯಕ್ಷಭಾರತಿ ಕನ್ಯಾಡಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ ಸ್ವಾಗತಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಪ್ರಸ್ತಾವಿಸಿದರು. ಗುರುರಾಜ ಹೊಳ್ಳ ಬಾಯರು ನಿರೂಪಿಸಿದರು. ದಶಮಾನೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು.