April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಇಂದಬೆಟ್ಟು ಆರೋಗ್ಯ ಕೇಂದ್ರದಲ್ಲೊಂದು ಅಚ್ಚರಿ; ಆಸ್ಪತ್ರೆ ಬಾಗಿಲು ಹಾಕದೆ ಹೋದ ಸಿಬ್ಬಂದಿಗಳು

ಬೆಳ್ತಂಗಡಿ: ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳು ಅಥವಾ ಇತರ ಸಿಬ್ಬಂದಿಗಳು ಇರುವುದು ಸಾಮಾನ್ಯ ಆದರೆ ಇಂದಬೆಟ್ಟು ಪ್ರಾಥಮಿಕ ಆಸ್ಪತ್ರೆಯಲ್ಲಿ ಫೆ.8ರಂದು ಸಂಜೆ 5.30ರಿಂದ ಯಾರೂ ಇಲ್ಲದೆ, ಬಾಗಿಲನ್ನು ಹಾಕದೆ ಸಿಬ್ಬಂದಿಗಳು ಹೋಗಿರುವುದು ಕಂಡು ಬಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 7 ಗಂಟೆ ತನಕ ಆಸ್ಪತ್ರೆಗಳು ಓಪನ್ ಆಗಿರುತ್ತದೆ. ಅಗತ್ಯವಿದ್ದವರು ಜೌಷಧಿಗಾಗಿ ಬರುತ್ತಿರುತ್ತಾರೆ. ನಂತರ ಹೆಚ್ಚಿನ ಕಡೆ ಬಾಗಿಲು ಹಾಕಿ ಸಿಬ್ಬಂದಿಗಳು ತೆರಳುತ್ತಾರೆ. ಆದರೆ ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು ಸಂಜೆ 5.30ಕ್ಕೆ ಸ್ಥಳೀಯರು ಹೋಗಿದ್ದು, ಅವರಿಗೆ ಅಚ್ಚರಿ ಕಾದಿತ್ತು. ಆಸ್ಪತ್ರೆ ಓಪನ್ ಆಗಿತ್ತು. ಆದರೆ ಒಳಗೆ ಯಾರೂ ಇರಲಿಲ್ಲ. ವೈದ್ಯರು, ನರ್ಸ್‌ಗಳು, ಸಿಬ್ಬಂದಿಗಳು ಯಾರು ಇಲ್ಲದೆ ಸ್ಥಳೀಯರು ಸಂಬಂಧ ಪಟ್ಟವರಿಗೆ ಮಾಹಿತಿ ನೀಡಲು ಮೊಬೈಲ್ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ. ಆಸ್ಪತ್ರೆಗೆ ಬಾಗಿಲನ್ನು ಹಾಕದೆ ಹೋಗಿರುವುದು ಸ್ಥಳೀಯರಿಗೆ ಆಶ್ಚರ್ಯವನ್ನು ತಂದಿದೆ.

Related posts

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

Suddi Udaya

ಬೆಳ್ತಂಗಡಿ ರಕ್ಷಿತ್ ಶಿವಾರಾಂ ರವರ ಸಹೋದರಿ ನಟ ವಿಜಯರಾಘವೇಂದ್ರರವರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಹೃದಯಾಘಾತದಿಂದ ನಿಧನ

Suddi Udaya

ಬೆಳಾಲು ಯಕ್ಷ ಮಾಣಿಕ್ಯ ಕಲಾ ಸಂಘ ಉದ್ಘಾಟನೆ

Suddi Udaya

ಉಜಿರೆ: ಲಕ್ಷ್ಮಣ ಗೋರೆ ನಿಧನ

Suddi Udaya

ಮಚ್ಚಿನ ಕಾರ್ಯಕ್ಷೇತ್ರದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ

Suddi Udaya

ಪಾಲೇದು ಸ.ಹಿ.ಪ್ರಾ.ಶಾಲೆಯ ಕೊಠಡಿ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

Suddi Udaya
error: Content is protected !!