37.5 C
ಪುತ್ತೂರು, ಬೆಳ್ತಂಗಡಿ
February 8, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

ಚಾರ್ಮಾಡಿ: ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾ. 1 ರಿಂದ ಮಾ. 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸು ಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ತೋಟತ್ತಾಡಿ ಚಿಬಿದ್ರೆ ಗ್ರಾಮಗಳ ಗೆಜ್ಜೆ ಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ಫೆ. 7 ರಂದು ಚಾರ್ಮಾಡಿ ಗ್ರಾಮದ ವಳಸರಿಯಲ್ಲಿ ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಗುರುನಾರಾಯಣ ಸೇವಾ ಸಂಘ ಚಾರ್ಮಾಡಿ ಇದರ ಅಧ್ಯಕ್ಷ ಉಜಿರೆ ಜಿಲ್ಲಾ ಪಂಚಾಯತ್ ಕ್ಷೇತ್ರದ ವಲಯ ಸಂಚಾಲಕ ಯಶೋಧರ ಪೂಜಾರಿಯವರು ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.


ಶ್ರೀ ಕ್ಷೇತ್ರ ಗೆಜ್ಜಗಿರಿ ಜಾತ್ರೆೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರರವರು ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ತಾಲೂಕಿನ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.


ವೇದಿಕೆಯಲ್ಲಿ ಗುರುನಾರಾಯಣಸ್ವಾಮಿ ಸೇವಾ ಸಂಘ ತೋಟತ್ತಾಡಿ ಇದರ ಅಧ್ಯಕ್ಷ ಸನತ್ ಕೋಟ್ಯಾನ್, ಚಿಬಿದ್ರೆ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಪೂಜಾರಿ ಅಂತರ, ಗುರು ನಾರಾಯಣ ಸ್ವಾಮಿ ಸೇವಾ ಸಂಘ ಚಾರ್ಮಾಡಿ ಇದರ ಕೋಶಾಧಿಕಾರಿ ಸದಾಶಿವ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಚಾರ್ಮಾಡಿ ಇದರ ಅಧ್ಯಕ್ಷ ಕೇಶವತಿ ಭೀಮಂಡೆ, ಉಪಸ್ಥಿತರಿದ್ದರು.


ರತ್ನಾಕರ ಪೂಜಾರಿ ಚಾರ್ಮಾಡಿ, ಉಮೇಶ್ ಪೂಜಾರಿ ಚಾರ್ಮಾಡಿ, ಸತೀಶ್ ಚಾರ್ಮಾಡಿ, ದಯಾನಂದ ವಲಸಾರಿ , ಶ್ರೀಧರ ಪೂಜಾರಿ ಉಮೇಶ್ ಭೀಟಿಗೆ ನಿಶಾಂತ್ ಭೀಮಂಡೆ ಹಾಗೂ ಗ್ರಾಮಸ್ಥರು ಸೇರಿದ್ದರು.


ಚಾರ್ಮಾಡಿ ಗುರು ನಾರಾಯಣಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಂಗಲೆಗುಡ್ಡೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸದಾಶಿವ ಪೂಜಾರಿ ಧನ್ಯವಾದವಿತ್ತರು.

Related posts

ದ.ಕ ಟೆಲಿಕಾಂ ಸಲಹಾ ಸಮಿತಿ ಸದಸ್ಯರಾಗಿ ಕೊರಗಪ್ಪ ನಾಯ್ಕ ಮುಂಡಾಜೆ ನೇಮಕ

Suddi Udaya

ಬೆಳ್ತಂಗಡಿ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶ

Suddi Udaya

ಕೊಕ್ಕಡ: ಇತ್ತೀಚೆಗೆ ನಿಧನರಾದ ತಿಮ್ಮಪ್ಪ ಗೌಡ ರವರ ಸವಿ ನೆನಪಿಗಾಗಿ ಪುತ್ರ ಗಣೇಶ್ ಗೌಡ ಕಲಾಯಿಯವರಿಂದ 800 ಹಣ್ಣಿನ ಗಿಡ ವಿತರಣೆ

Suddi Udaya

ಕೊಕ್ಕಡ ಕೇಸರಿ ಗೆಳೆಯರ ಬಳಗದ ವತಿಯಿಂದ ಅಯೋಧ್ಯ ಟ್ರೋಫಿ: ಅಯೋಧ್ಯ ಕರಸೇವಕರಿಗೆ ಸನ್ಮಾನ

Suddi Udaya

ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ

Suddi Udaya

ಲಾಯಿಲ: ಸಂವಿಧಾನ ಜಾಗೃತಿ ಜಾಥ

Suddi Udaya
error: Content is protected !!