![](https://suddiudaya.com/wp-content/uploads/2025/02/1001665808-1024x461.jpg)
ಗುರುವಾಯನಕೆರೆ: ಭಕ್ತರ ಪಾಲಿನ ಕಾರಣಿಕ ಕ್ಷೇತ್ರವಾಗಿ, ಅಜಿಲ ಸೀಮೆಯಲ್ಲಿ ಕಲಿಯುಗದ ಕೈಲಾಸವೆಂದೇ ಹೆಗ್ಗಳಿಕೆ ಪಡೆದಿರುವ ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವವು ಧರ್ಮಸ್ಥಳ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ, ಮಡಂತ್ಯಾರು ವೇ.ಮೂ. ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಫೆ.9ರಿಂದ ಆರಂಭಗೊಂಡಿದ್ದು, ಇದರ ಅಂಗವಾಗಿ ಭಕ್ತಾದಿಗಳಿಂದ ಭವ್ಯವಾದ ಹೊರೆ ಕಾಣಿಕೆ ಬೃಹತ್ ಮೆರವಣಿಗೆ ಫೆ.9ರಂದು ವಿಜೃಂಭಣೆಯಿಂದ ಜರುಗಿತು.
![](https://suddiudaya.com/wp-content/uploads/2025/02/1001665825-1024x461.jpg)
ಬೃಹತ್ ಹೊರ ಕಾಣಿಕೆಯ ಮೆರವಣಿಗೆ ಶ್ರೀಮತಿ ಕಾಶಿ ಶೆಟ್ಟಿ ನವಶಕ್ತಿ ದೀಪ ಬೆಳಗಿಸಿ ಚಾಲನೆ ನೀಡಿದರು.
![](https://suddiudaya.com/wp-content/uploads/2025/02/1001665834-1024x466.jpg)
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ಬ್ರಹ್ಮಕುಂಭಾಭಿಷೇಕ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ನವಶಕ್ತಿ,ಬ್ರಹ್ಮಕುಂಭಾಭಿಷೇಕ ಸಮಿತಿಯ ಸಮಿತಿಯ ಕಾರ್ಯಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ, ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ವಾತ್ಸಲ್ಯ , ಸುನೀಶ್ ಕುಮಾರ್, ಸಂತೋಷ್ ಕುಮಾರ್ ಜೈನ್ , ರಾಜೇಶ್ ಶೆಟ್ಟಿ ಹಾಗೂ ಕುಟುಂಬಸ್ಥರು,
![](https://suddiudaya.com/wp-content/uploads/2025/02/1001665864-1024x461.jpg)
ಪ್ರಮುಖರಾದ , ಸುನೀಶ್ ಕುಮಾರ್, ಸಂತೋಷ್ ಕುಮಾರ್ ಜೈನ್ ಪಡಂಗಡಿ, ಕಾಂತಪ್ಪ ಮೂಲ್ಯ,
ಆನಂದ ಶೆಟ್ಟಿ ವಾತ್ಸಲ್ಯ, ಸುಭಾಷ್ ಚಂದ್ರ ಜೈನ್ ಶ್ರೀ ಸ್ವಸ್ತಿಕ್, ಸಾಯಿ ಕುಮಾರ್ ಶೆಟ್ಟಿನವಶಕ್ತಿ,ಸೀತಾರಾಮ ಶೆಟ್ಟಿ ವೈಭವ್, ರಾಜಪ್ಪ ಶೆಟ್ಟಿ ಸುಧೇಕ್ಕಾರ್, ಗೋಪಿನಾಥ್ ನಾಯಕ್, ವಡಿವೇಲು, ಉಮೇಶ್ ಕುಲಾಲ್, ಶಶಿರಾಜ್ ಶೆಟ್ಟಿ, ಜಯರಾಂ ಭಂಡಾರಿ, ರಾಜು ಶೆಟ್ಟಿ, ಗೋಪಾಲ ಶೆಟ್ಟಿ ಕೊಯಾ೯ರು, ಪುಷ್ಪರಾಜ ಶೆಟ್ಟಿ,
![](https://suddiudaya.com/wp-content/uploads/2025/02/1001665874-1024x461.jpg)
ರಾಮಚಂದ್ರ ಶೆಟ್ಟಿ, ಸಹ ಸಂಚಾಲಕಯ ವಸಂತ ಗೌಡ ವರಕಬೆ, ಆನಂದ ಕೋಟ್ಯಾನ್, ಸುಧಾಮಣಿ, ಪ್ರಿಯಾ ಹೆಗ್ಡೆ, ಶ್ರೀಮತಿ ಮಂಗಳಾ, ಪ್ರಜ್ವಲ್ ಶೆಟ್ಟಿ ಪಾಡ್ಯಾರು, ನಾರಾಯಣ ಪೂಜಾರಿ, ರಾಜ್ ಪ್ರಕಾಶ್ ಶೆಟ್ಟಿ, ಅಜಿತ್ ಕೆ.ಶೆಟ್ಟಿ, ರಮಾನಂದ ಸಾಲ್ಯಾನ್, ಉಮೇಶ್ ಶೆಟ್ಟಿ ಉಜಿರೆ, ನಾರಾಯಣ ಪೂಜಾರಿ ಮೇಲಂತಬೆಟ್ಟು, ಚಂದ್ರರಾಜ್ ಮೇಲಂತಬೆಟ್ಟು,
ಕಡಂಬು, ಮಧುರಾಜ್ ಹಾಗೂ ವಿತೇಶ್ ಜೈನ್ ಪಡಂಗಡಿ, ರಮಾನಂದ ಸಾಲ್ಯಾನ್, ದಾಮೋದರ್, ತಿಲಕ್ ರಾಜ್,
ನಾರಾಯಣ ಆಚಾರ್ಯ ಬರಾಯ, ವಿತೇಶ್ ಬಂಗೇರ,
ನಿತಿನ್ ಬಂಗೇರ ಬರಾಯ ಮೊದಲಾದವರು ಉಪಸ್ಥಿತರಿದ್ದರು
![](https://suddiudaya.com/wp-content/uploads/2025/02/1001665980-1024x466.jpg)
ಸಂಜೆ 5ಕ್ಕೆ ನವಶಕ್ತಿ ಕ್ರೀಡಾಂಗಣ ಶಕ್ತಿನಗರದಿಂದ ಶಕ್ತಿನಗರಕ್ಕೆ ಅಲ್ಲಿಂದ ಗುರುವಾಯನಕೆರೆ ಪೇಟೆಗಾಗಿ
ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟಕ್ಕೆ ವೈಭವಪೂರ್ಣ ಮೆರವಣಿಗೆಯೊಂದಿಗೆ ಹೊರೆಕಾಣಿಕೆ ಭವ್ಯ ಶೋಭಾಯಾತ್ರೆ ನೆರವೇರಿತು.
ಎಕ್ಸೆಲ್ ಕಾಲೇಜು ಗುರುವಾಯನಕೆರೆ ಪ್ರಾಯೋಜಕತ್ವದಲ್ಲಿ
ಕುಡುಪು ಶ್ರೀ ಫ್ರೆಂಡ್ಸ್ ಧಮ೯ಸ್ಥಳ ಹಾಗೂ ಮುಂಗಳೂರಿನ ಪ್ರಸಿದ್ಧ ಹುಲಿ ವೇಷ ತಂಡದಿಂದ ಹುಲಿ ಕುಣಿತ, ಸೃಷ್ಟಿ ಆಟ್ಸ್೯ ಇವರ ಯಕ್ಷಗಾನ ವೇಷ, ಹತ್ತು ಭಜನಾ ತಂಡಗಳಿಂದ ಮೆರವಣಿಗೆಯುದ್ದಕ್ಕೂ ಕುಣಿತ ಭಜನೆ, ಕೊಂಬು,ಚೆಂಡೆ, ವಾದ್ಯ ಮೆರವಣಿಗೆಯ ಆಕಷ೯ಣೆಯಾಗಿತ್ತು.
![](https://suddiudaya.com/wp-content/uploads/2025/02/1001665948-1024x466.jpg)
ಫೆ ಬೆಳಿಗ್ಗೆ 9:೦೦ ರಿಂದ ಮಧ್ಯಾಹ್ನ ಗಂಟೆ 2:೦೦ ರ .9ರಂದುತನಕ ಬ್ರಹ್ಮಕುಂಭಾಭಿಷೇಕಕ್ಕೆ ನೀಡುವ ಹೊರೆಕಾಣಿಕೆಯನ್ನು ಪಡಂಗಡಿ – ಶ್ರೀ ಅಯ್ಯಪ್ಪ ಮಂದಿರ, ಪೊಯ್ಯಗುಡ್ಡೆ, ಓಡಿಲ್ನಾಳ – ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮದ್ದಡ್ಕ ಶ್ರೀ ರಾಮ ಭಜನಾ ಮಂದಿರ, ಮದ್ದಡ್ಕ, ಶಕ್ತಿನಗರ- ನವಶಕ್ತಿ ಕ್ರೀಡಾಂಗಣ ಗುರುವಾಯನಕೆರೆ- ಹವ್ಯಕ ಭವನ ಈ ಪ್ರದೇಶಗಳಿಂದ ಸ್ವೀಕರಿಸಲಾಯಿತು.