![](https://suddiudaya.com/wp-content/uploads/2025/02/1001665724-1024x472.jpg)
ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶ್ರೀ ಕ್ಷೇತ್ರ ಎರ್ನೋಡಿ ಉಜಿರೆ, ಇದರ ಈ ವರ್ಷದ ನೇಮೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 9.2.2025 ನೇ ಆದಿತ್ಯವಾರ ದಂದು ನೆರವೇರಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವನ್ನು ಕ್ಷೇತ್ರದ ಟ್ರಸ್ಟಿ ಉಪಾಧ್ಯಕ್ಷರಾದ ಕೆ ಜಯಂತ ಶೆಟ್ಟಿ ಕುಂಟಿಣಿ ಯವರು ನೆರವೇರಿಸಿದರು.
![](https://suddiudaya.com/wp-content/uploads/2025/02/1001666476-1024x331.jpg)
ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ರಾದ ಯು ಬಾಬು ಮೊಗೇರ ಎರ್ನೋಡಿ, ಟ್ರಸ್ಟಿ ಗಳಾದ ಕೆ.ಸಂಜೀವ ಶೆಟ್ಟಿ ಕುಂಟಿಣಿ, ನೋಣಯ್ಯ ಪುಂಜಾಲಕಟ್ಟೆ, ತನಿಯಪ್ಪ ಅಶ್ವತಕಟ್ಟೆ ಉಜಿರೆ, ಹಾಗೂ ಪದಾಧಿಕಾರಿ ಗಳಾದ ಉದಯ ಶೆಟ್ಟಿ ಪಾರ, ಪದ್ಮ ನಾಯ್ಕ ಪಾರ, ಮೋಹನ್ ಕನ್ಯಾಡಿ, ರಂಜನ್ ದೇವಾಡಿಗ ಉಜಿರೆ,ಗಿರೀಶ್ ಗೌಡ ಅರಳಿ,ರಾಜೇಶ್ ಜೋಗಿ, ಪ್ರದೀಪ್ ಎರ್ನೋಡಿ , ದಿಲೀಪ್ ಎರ್ನೋಡಿ ಉಜಿರೆ ಉಪಸ್ಥಿತರಿದ್ದರು.