ಗುರುವಾಯನಕೆರೆ: ಇಲ್ಲಿಯ ಗುರುವಾಯನಕೆರೆ ಯಲ್ಲಿ ಇಂದು ಮಧ್ಯಾಹ್ನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಸುಮಾರು 55 ರಿಂದ 60 ವಷ೯ ಪ್ರಾಯದ ಗಂಡಸಿನ ಶವ ಇದಾಗಿದ್ದು, ಚಡ್ಡಿ ಮತ್ತು ಪ್ಯಾಂಟ್ ಧರಿಸಿರುವುದು ಕಂಡು ಬಂದಿದೆ. ಈ ವ್ಯಕ್ತಿ ಆಕಸ್ಮಿಕವಾಗಿ ಕೆರೆಗೆ ಬಿದ್ದರೆ ಅಥವಾ ಇನ್ನೇನಾದರೂ ಘಟನೆ ನಡೆದಿದೆಯೇ ಎಂದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ಅಗ್ನಿ ಶಾಮಕದವರು ಶವವನ್ನು ಕೆರೆಯಿಂದ ಮೇಲೆತ್ತಿದರು.