ಬೆಳ್ತಂಗಡಿ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಳೆಕೋಟೆ, ಬೆಳ್ತಂಗಡಿ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಫೆ. 9ರಂದು ಜರುಗಿತು.
![](https://suddiudaya.com/wp-content/uploads/2025/02/1001558323-1-1024x471.jpg)
ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ವಹಿಸಿದ್ದರು.ದಿನೇಶ್ ಕೊಯ್ಯೂರು ಸಭೆಯ ನೋಟೀಸ್ ಓದಿ ದಾಖಲಿಸಿದರು. ಕಾರ್ಯದರ್ಶಿ ಗಣೇಶ್ ಗೌಡ ವರದಿ ಮಂಡಿಸಿದರು. 2023-24ನೇ ಸಾಲಿನ ಲೆಕ್ಕಪತ್ರವನ್ನು ಯುವರಾಜ್ ಅನಾರು ಮಂಡಿಸಿದರು. ಮುಂದಿನ ವರ್ಷದ ಅಭಿವೃದ್ಧಿ ವಿಷಯಗಳ ಬಗ್ಗೆ ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ನೀಡಿದ ಕಿರಣ್ ಚಂದ್ರ ಪುಷ್ಪಗಿರಿ ಹಾಗೂ ಡಾ. ರತ್ನಾ ಬೆಳಾಲು, ಪಿಹೆಚ್ ಡಿ ಪಡೆದ ಡಾ. ಶೀಲಾವತಿ ಬೆಳಾಲು , ಕಲ್ಲೇರಿ ಶಾಖೆ ಪ್ರಾರಂಭಿಸುವಲ್ಲಿ ಉಸ್ತುವಾರಿ ವಹಿಸಿದ್ದ ಯುವರಾಜ್ ಅನಾರುರವರನ್ನು ಸನ್ಮಾನಿಸಲಾಯಿತು
![](https://suddiudaya.com/wp-content/uploads/2025/02/1001558337-1-1024x471.jpg)
.ಈ ಸಂದರ್ಭ ಬೆಳಾಲು ಗ್ರಾಮ ಸಮಿತಿಯವರು ರೂ. 50,000ವನ್ನು ಕಟ್ಟಡ ನಿರ್ಮಾಣಕ್ಕೆ ನೀಡಿದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕರು,ಮಹಿಳಾ ಸಂಘದ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಉಪಸ್ಥಿತರಿದ್ದರು.
ಪ್ರಾಪ್ತಿ, ಚಾರ್ವಿ, ಸಾನ್ವಿ, ಅದೀಕ್ಷ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಸ್ವಾಗತಿಸಿದರು. ಶ್ರೀನಾಥ್ ಕೆ. ಎನ್. ಧನ್ಯವಾದವಿತ್ತರು. ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.
![](https://suddiudaya.com/wp-content/uploads/2025/02/1001558346-1024x471.jpg)