ಬೆಳ್ತಂಗಡಿ : ಅಳದಂಗಡಿಯ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಫೆ.7 ರಂದು ಮುಂಡೂರು ನಿವಾಸಿ ರಮಣಿ ರವರ ಚಿನ್ನದ ಬ್ರಾಸ್ ಲೆಟ್ ಕಳೆದು ಹೋಗಿದ್ದು ಫೆ.9 ರಂದು ಅಳದಂಗಡಿ ಸತ್ಯದೇವತೆ ದೈವಸ್ಥಾನದ ಕಾರ್ಣಿಕದಿಂದ ಮೇಲಂತಬೆಟ್ಟು ಬಳಿ ಪತ್ತೆಯಾಗಿದೆ.
ಮುಂಡೂರು ನಿವಾಸಿ ರಮಣಿಯ ರವರು ಫೆ,.7ರಂದು ಅಳದಂಗಡಿ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಕಳೆದು ಕೊಂಡಿದ್ದ ಚಿನ್ನದ ಬ್ರಾಸ್ ಲೆಟ್ ಅಂದು ಹುಡುಕಾಡಿದರು ಪತ್ತೆಯಾಗಲಿಲ್ಲ , ಈ ವೇಳೆ ಚಿನ್ನದ ಬ್ರಾಸ್ ಲೆಟ್ ಸಿಕ್ಕಿ ದ್ದರೆ ಅಳದಂಗಡಿ ಸತ್ಯದೇವತೆಗೆ ಅಗೇಲು ಕೊಡುವುದಾಗಿ ಹರಕೆ ಹೊತ್ತುಕೊಂಡಿದ್ದರು. ಹರಕೆ ಹೊತ್ತ ಫಲದಿಂದ ಫೆ.9 ರಂದು ಚಿನ್ನದ ಬ್ರಾಸ್ ಲೆಟ್ ಪತ್ತೆಯಾಗಿದೆ ಎಂದು ರಮಣಿ ರವರು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲರವರಿಗೆ ತಿಳಿಸಿದ್ದಾರೆ.