24.4 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ, ಧಾರ್ಮಿಕ ಸಭೆ

ಉರುವಾಲು: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇಲ್ಲಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮವು ಜಾತ್ರೋತ್ಸವ ಕಾರ್ಯಕ್ರಮದ ಗೌರವಾಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ವೇಳೆ ದೇವೇಂದ್ರ ಹೆಗ್ಡೆ ಕೊಕ್ರಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ದೇವರ ಬಿಲ್ಲೆ ಮರೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ್ ನಾಯಕ್ ರೈತಬಂಧು ಆಹಾರೋದ್ಯಮ ಮಾರುತೀಪುರ ಕಣಿಯೂರು, ಮೋನಪ್ಪ ಪೂಜಾರಿ ಕಂಡೆತ್ಯಾರು ಆಡಳಿತ ಮೊಕ್ತೇಸರರು ಬಾಲಸುಬ್ರಹ್ಮಣ್ಯ ದೇವಸ್ಥಾನ ಮಡವು ಪಾಂಡವರಕಲ್ಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಗೌಡ ಅಣವು, ದೇವಸ್ಥಾನ ಸಹಮೋಕ್ತೇಸರರಾದ ಸೇಸಪ್ಪ ರೈ ಕೊರಿಂಜ , ಸೀತಾರಾಮ ಆಳ್ವ ಕೊರಿಂಜ‌, ಉಪಸ್ಥಿತರಿದ್ದರು.

ಯಮುನಾ ತುಂಬ್ಯ ಮತ್ತು ವೆಂಕಟ್ರಮಣ ಭಟ್ ಸರಳಿ ಇವರನ್ನು ಗೌರವಪೂರ್ವಕವಾಗಿ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಜಾತ್ರೋತ್ಸವ ಕಾರ್ಯಕ್ರಮದ ಕಾರ್ಯದರ್ಶಿ ಶ್ರೀಮತಿ ಕೇಶವತಿ ಉರುವಾಲು ಇವರ ಧನ್ಯವಾದವಿತ್ತರು.
ಮೈರೋಳ್ತಡ್ಕ ಶಾಲೆಯ ಸಹಶಿಕ್ಷಕ ಮಾಧವ ಗೌಡ ಕಾರ್ಯಕ್ರಮ ನಿರೂಪಿಸಿದರು.

Related posts

ಪಣಕಜೆ : ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗು: ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡು ಮೃತ್ಯು

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಪಾದಾಯಾತ್ರಿಗಳಿಗೆ ಕಲ್ಮಂಜದ ಮದಿಮಾಲಕಟ್ಟೆಯ ಜಾನಕಿ ಮತ್ತು ಮಕ್ಕಳಿಂದ ಅನ್ನದಾನ ಸೇವೆ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ. ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಉಜಿರೆಯ ಸಾಂತ್ವಾನ ಕೇಂದ್ರ ಮಲ್ ಜಅ ದಲ್ಲಿ ಬೃಹತ್ ಪ್ರಾರ್ಥನಾ ಸಮ್ಮೇಳನದ ಪ್ರಯುಕ್ತ ಇಫ್ತಾರ್ ಕೂಟ

Suddi Udaya

ಬೆಳ್ತಂಗಡಿ: ಶಾಲೆಗಳಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಖಂಡಿಸಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya
error: Content is protected !!