ಬೆಳ್ತಂಗಡಿ: ಬಂಟ್ವಾಳದ ಎನ್.ಸಿ ರೋಡ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಗೇರುಕಟ್ಟೆ ಮನಶರ್ ಶಾಲೆಯ ವಿದ್ವಾಂಸ ಉಮರ್ ಅಸ್ಸಖಾಫ್ ಮನಶರ್ ತಂಙಳರ ಕುಟುಂಬ ಗಾಯಗೊಂಡ ಘಟನೆ ಫೆ.9ರಂದು ನಡೆದಿದೆ.
![](https://suddiudaya.com/wp-content/uploads/2025/02/accident2.jpg)
ಗುರುವಾಯನಕೆರೆ ಕಡೆಯಿಂದ ಮಂಗಳೂರು ಕಡೆ ಸಂಚರಿಸುತ್ತಿದ್ದ ಮನಶರ್ ತಂಙಳರ ಕಾರು ಪೆಟ್ರೋಲ್ ಪಂಪ್ ಕಡೆ ತಿರುಗಿಸಿದ್ದು ಇದೇವೇಳೆ ಅತೀ ವೇಗದಿಂದ ಬಂದ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ.
ಘಟನೆಯಿಂದ ಮನಶರ್ ತಂಙಳ್ ರವರ ಪತ್ನಿ ಮತ್ತು ಮಕ್ಕಳು ಗಾಯಗೊಂಡಿದ್ದಾರೆ.