ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ಮುಂದಿನ ಮೂರು ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಹರೀಶ್ ಕೋಟ್ಯಾನ್ ಸದಸ್ಯರಾಗಿ, ರವೀಂದ್ರ ಬಿ ಅಮೀನ್, ಪ್ರಶಾಂತ , ಶ್ರೀಮತಿ ಗಿರಿಜಾ ಶೆಟ್ಟಿ, ಅನಿತಾ, ವಸಂತ ಬಿ ಬಂಗೇರ , ರಾಮಣ್ಣಗೌಡ ,ಶ್ರೀನಿವಾಸ ಪೈ ಮತ್ತು ಪ್ರಧಾನ ಅರ್ಚಕರಾಗಿ ಗಣೇಶ್ ಭಟ್ ನಂದಿ ಬೆಟ್ಟ ನೇಮಕವಾಗಿದ್ದಾರೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ, ಕಾಶಿಪಟ್ಣ ಗ್ರಾಮ ಆಡಳಿತ ಅಧಿಕಾರಿ, ಸುಜಿತ್ ನಡೆಸಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.