ಹೊಸಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ಹೊಸಂಗಡಿ ವಲಯದ ಕೇಳದಪೇಟೆ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರದಿಂದ ಮಾಶಾಸನ ಸಿಗುತ್ತಿರುವ ಬಡ ಕುಟುಂಬ ಅಪ್ಪಿ ಪೂಜಾರ್ತಿ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರ ವೈದ್ಯಕೀಯ ಖರ್ಚಿಗಾಗಿ ಕ್ಷೇತ್ರದಿಂದ ಮಂಜೂರಾದ 20000 ಮೊತ್ತ ಹಾಗೂ ಕಾಮೋಡೋ ವೀಲ್ ಚಯರ್ ಅನ್ನು ಕೇಳದಪೇಟೆ ಒಕ್ಕೂಟದ ಅಧ್ಯಕ್ಷರು ರಾಘವೇಂದ್ರ ದೇವಾಡಿಗ , ಉಪಾಧ್ಯಕ್ಷರು ಶ್ರೀಮತಿ ಚಿತ್ರ ಇವರು ವಿತರಿಸಿದರು.,
ವಲಯ ಮೇಲ್ವಿಚಾರಕಿ ಶ್ರೀಮತಿ ವೀಣಾ ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರೀಮತಿ ಪೂರ್ಣಿಮಾ ಸೇವಾಪ್ರತಿನಿಧಿಗಳಾದ ಅಕ್ಷತಾ, ಶಶಿಕಲಾ,ಕಛೇರಿ ಸಿಬ್ಬಂದಿ ರವಿ ಇವರು ಉಪಸ್ಥಿತರಿದ್ದರು.