
ನಾರಾವಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಾರಾವಿ ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ನಾರಾವಿ ಸಿಎ ಬ್ಯಾಂಕಿನ ಹಾಲಿ ಅಧ್ಯಕ್ಷ ಸುಧಾಕರ ಭಂಡಾರಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಗದೀಶ್ ಹೆಗ್ಡೆ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ರಾಜೇಂದ್ರ ಕುಮಾರ್, ಸುಜಲತಾ, ಸುಪ್ರೀಯಾ, ಪದ್ಮಶ್ರೀ, ಸದಾನಂದ ಗೌಡ, ಉಮೇಶ್ ಗೌಡ , ಕೃಷ್ಣಪ್ಪ ಪೂಜಾರಿ, ಯಶೋಧ ಕುತ್ಲೂರು , ಶೇಖರ, ವಿಠಲ ಪೂಜಾರಿ, ಆಯ್ಕೆಯಾದರು.

ವಲಯ ಮೇಲ್ವಿಚಾರಕ ಸಿರಾಜುದ್ದೀನ್, ನಾರಾವಿ ಸಿಎ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಾಂತ್ ಜೈನ್,ವಿಲಾಸ್ ಉಪ ನಿಬಂಧಕರ ಕಚೇರಿ ಮಂಗಳೂರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.