31.2 C
ಪುತ್ತೂರು, ಬೆಳ್ತಂಗಡಿ
April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಮಾಗಮ

ಗೇರುಕಟ್ಟೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಳ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಸಮಾಗಮ ಫೆ.9 ರಂದು ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ವಸಂತ ರಾಯಿಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಗುರುವಾಯನಕೆರೆ ವಲಯ ಸಿ ಆರ್ ಪಿ ರಾಜೇಶ್, ಹಳೆವಿದ್ಯಾರ್ಥಿ ಸಂಘದ ಧ್ಯೇಯ, ಉದ್ದೇಶಗಳು, ಕಾರ್ಯನಿರ್ವಹಿಸಬೇಕಾದ ಬಗ್ಗೆ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ರೀತಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಗಳಾದ ರಾಜೇಶ್ ಪೆಂರ್ಬುಡ, ನಾಸೀರುದ್ದೀನ್ ಜಾರಿಗೆಬೈಲು, ದಿವ್ಯಾ ನಾಳ ಶಾಲಾ ದಿನಗಳ ಮೆಲುಕು ಹಾಕಿದರು.


ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ರಾಜೇಶ್ ಪೆಂರ್ಬುಡ ಅವರನ್ನು ಆಯ್ಕೆಮಾಡಲಾಯಿತು.


ಉಪಾಧ್ಯಕ್ಷರಾಗಿ ಅಬ್ದುಲ್ ರಫೀಕ್ ಜಾರಿಗೆಬೈಲು, ಕಾರ್ಯದರ್ಶಿಯಾಗಿ ಗಣೇಶ್ ಬಿ. ನಾಳ, ಜತೆಕಾರ್ಯದರ್ಶಿಯಾಗಿ ದಿವ್ಯಾ ನಾಳ, ಕೋಶಾಧಿಕಾರಿಯಾಗಿ ಸಂದೀಪ್ ಗಾಣಿಗ ನಾಳ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿಕಿರಣ್, ಸೋಮಣ್ಣ ಗೌಡ ಕುಬಾಯ, ನಾಸೀರುದ್ದೀನ್ ಜಾರಿಗೆಬೈಲು, ಜಯಚಂದ್ರ ಗಂಪದಕೋಡಿ, ಸಮಿತಾ ನಾಳ, ಶಶಿಕಲಾ ನಾಳ, ಗೌರವ ಸಲಹೆಗಾರರಾಗಿ ವಸಂತ‌ ಮಜಲು, ಸುಧಾಕರ ಮಜಲು, ಅಬ್ದುಲ್ ಲತೀಫ್ ಪರಿಮ, ಕೇಶವ ಪೂಜಾರಿ ನಾಳ, ಅಶೋಕ ಆಚಾರ್ಯ ಗಂಪದಕೋಡಿ, ವಸಂತ ರಾಯಿಮಾರ್ ಅವರನ್ನು ಆಯ್ಕೆ ಮಾಡಲಾಯಿತು.


ಹರಿಶ್ಚಂದ್ರ ಗಂಪದಕೋಡಿ, ಶೋಭಾ ಆಚಾರ್ಯ ನಾಳ, ರಾಜೇಂದ್ರ ಮಡಿವಾಳ, ಇದ್ದರು. ಸಹಶಿಕ್ಷಕಿ ಕವಿತಾ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ರೋನಾಲ್ಡ್ ಪಿಲೀಫ್ ಡಿಮೆಲ್ಲೋ ಪ್ರಾಸ್ತಪಿಸಿ , ವಂದಿಸಿದರು. ಸಹಶಿಕ್ಷಕಿ ದಮಯಂತಿ ಕಾರ್ಯಕ್ರಮ ‌ನಿರೂಪಿಸಿದರು.

Related posts

ಗರ್ಡಾಡಿ: ಕುಂಡದಬೆಟ್ಟು ನಿವಾಸಿ ವೆಂಕಪ್ಪ ಮೂಲ್ಯ ನಿಧನ

Suddi Udaya

ಕೊಯ್ಯೂರು : ಕಲ್ಪಾಮೃತ -ಸ್ವಾನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

Suddi Udaya

ದಭೆ೯ತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನಕ್ಕೆ ಶ್ರೀ ಕಂಚಿ ಕಾಮಕೋಟಿ ಶ್ರೀಗಳು ಭೇಟಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರಿಂದ ಗಿಡ ನೆಡುವ ಕಾರ್ಯಕ್ರಮ

Suddi Udaya

ಪಾತಾಳ ವೆಂಕಟರಮಣ ಭಟ್ಟರಿಗೆ ಕುರಿಯ ಪ್ರಶಸ್ತಿ

Suddi Udaya

ಕೆಎಸ್‌ಆರ್‌ಟಿಸಿ ಧರ್ಮಸ್ಥಳ -ಮಂಗಳೂರು ನಡುವೆ ನಾಲ್ಕು ‘ಸೂಪರ್‌ಫಾಸ್ಟ್’ – ಬಸ್ಸು ಸಂಚಾರ ಪ್ರಾರಂಭ

Suddi Udaya
error: Content is protected !!