September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಪರಿಸರದಲ್ಲಿ ಚಿರತೆ ಓಡಾಟ: ಗ್ರಾಮಸ್ಥರಲ್ಲಿ ಭಯದ ವಾತವರಣ

ಮಚ್ಚಿನ ಗ್ರಾಮದ ಅನಯನಕಾಡು, ಮುಡಿಪಿರೆ, ಕೈಲಾ ಕುರುಡಂಗೆ ಪರಿಸರದಲ್ಲಿ ಚಿರತೆ ತಿರುಗಾಡುತ್ತಿದ್ದು ಜನರು ಭಯಪಡುವಂತಾಗಿದೆ. ಸ್ಥಳೀಯರಾದ ಉದಯ ಇವರು ರಾತ್ರಿ 11ರ ಸಮಯ ಬೈಕಲ್ಲಿ ಸಂಚರಿಸುವ ವೇಳೆ ಅನಯನ ಕಾಡು ರಸ್ತೆಯಲ್ಲಿ ಚಿರತೆ ಎದುರು ಬಂದ ಘಟನೆ ಇತ್ತೀಚಿಗೆ ನಡೆದಿದೆ.

ಮುಡಿಪಿರೆ ಪರಿಸರದಲ್ಲಿ ದಿವಾಕರ ಹಾಗೂ ಇತರರಿಗೂ ಎದುರಾದ ಘಟನೆ ನಡೆದಿದೆ. ದೊಡ್ಡದಾದ ಚಿರತೆಯು ತಿರುಗಾಡುತ್ತಿದ್ದು ರಾತ್ರಿ ಹಾಗೂ ಮುಂಜಾನೆಯ ಮೇಲೆ ಜನರ ಎದುರು ಪ್ರತ್ಯಕ್ಷವಾಗುತ್ತಿದ್ದು ಜನರು ಸಂಚರಿಸಲು ಭಯಪಡುವಂತಾಗಿದೆ. ದಿನನಿತ್ಯ ರಸ್ತೆಯಲ್ಲಿ ಶಾಲಾ ಮಕ್ಕಳು ನಡೆದುಕೊಂಡು ಹೋಗುವ ಈ ರಸ್ತೆಯಲ್ಲಿ ಪೊದೆಗಳು ಮುತ್ತಿಕೊಂಡಿದ್ದು ಕಾಡು ಪ್ರಾಣಿಗಳು ಅವಿತಿದ್ದರು ಗೋಚರಿಸದಂತಾಗಿದೆ. ಈ ಚಿರತೆಯಿಂದ ದೊಡ್ಡ ಅನಾಹುತ ಆಗುವ ಮುನ್ನ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯವಾಗಿದೆ.
✍️ವರದಿ: ಹರ್ಷ ಬಳ್ಳಮಂಜ

Related posts

ಯೋಗಾಸನ ಸ್ಪರ್ಧೆ: ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿ ಮೋಹಿತ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Suddi Udaya

ವಿವಿಧ ವಿನ್ಯಾಸಗಳ ಚಿನ್ನ ಹಾಗೂ ವಜ್ರದ ಆಭರಣಗಳ ಶೋರೂಮ್ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿಸ್ತೃತ ಶೋರೂಮ್; ಮುಳಿಯ ಬ್ರಾಂಡ್ ಅಂಬಾಸಿಡರ್ ರಮೇಶ್ ಅರವಿಂದ್‌ ದೀಪ ಪ್ರಜ್ವಲಿಸಿ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ಪರಿಸರ ದಿನ ಆಚರಣೆ: ಗಿಡ ನೆಟ್ಟ ಪ್ರಥಮ ಪಿಯು ವಿದ್ಯಾರ್ಥಿಗಳು

Suddi Udaya

‘ಪ್ರಾಚೀನ ಕನ್ನಡ ಸಾಹಿತ್ಯ ಅಧ್ಯಯನ: ಪ್ರಾರಂಭಿಕ ಪ್ರಯತ್ನಗಳು’ ಪ್ರಚಾರೋಪನ್ಯಾಸ ಕಾರ್ಯಕ್ರಮ

Suddi Udaya

ಕುಂಟಿನಿ ಎಸ್.ಬಿ.ಎಸ್ ಚುನಾವಣೆ: ಅಧ್ಯಕ್ಷರಾಗಿ ಮುಹಮ್ಮದ್ ಉವೈಸ್ ಆಯ್ಕೆ

Suddi Udaya
error: Content is protected !!