27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಗಂಡಿಬಾಗಿಲು ಸಿಯೋನ್ ಅಶ್ರಮಕ್ಕೆ ಭೇಟಿ

ಬಳಂಜ: ಹಲವು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯದಲ್ಲೂ ಕುಣಿತ ಭಜನೆಯನ್ನು ನೀಡಿ ಹೆಸರನ್ನು ಪಡೆದಿರುವ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಫೆ.9 ರಂದು ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಿಯೊನ್ ಅಶ್ರಮಕ್ಕೆ ಭೇಟಿ ನೀಡಿ ಮಂಡಳಿಯ ವತಿಯಿಂದ ಅಲ್ಲಿನ ಆಶ್ರಮವಾಸಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎರಡನೇ ವರ್ಷದ ದಾನ್ ಕಾರ್ಯಕ್ರಮವನ್ನು ಆಶ್ರಮದಲ್ಲಿ ಸಿಯೋನ್ ಆಶ್ರಮ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಯು. ಸಿ.ಪೌಲೋಸ್ ಹಾಗೂ ಮೇರಿ ಪೌಲೋಸ್ ದಂಪತಿಗಳ ಗೌರವ ಉಪಸ್ಥಿತಿಯಲ್ಲಿ ಆಚರಿಸಲಾಯಿತು. ನಂತರ ನಡೆದ ಸಭೆಯಲ್ಲಿ ಮಂಡಳಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಯು.ಸಿ.ಪೌಲೋಸ್ ರವರು, ನಿರ್ಗತಿಕರು, ಅನಾಥರು ಹಾಗೂ ನೊಂದವರ ಸೇವೆಯನ್ನು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡಿದಾಗ ಅದು ದೇವರಿಗೆ ಸಲ್ಲಿಸುವ ದೊಡ್ಡ ಕಾಣಿಕೆಯಾಗಿದ್ದು ಇದರಿಂದ ದೇವರು ಸಂತೃಪ್ತರಾಗಿ ನಮ್ಮನ್ನು ರಕ್ಷಿಸುತ್ತಾರೆ ಎಂದು ಶುಭವನ್ನು ಹಾರೈಸಿದ ಪೌಲೋಸ್ ರವರು, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಸೇವೆ ಶ್ಲಾಘನೀಯ ಎಂದು ಅಭಿನಂದಿಸಿದರು.

ಮಂಡಳಿಯ ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಮಾತನಾಡಿ, ಸಿಯೊನ್ ಆಶ್ರಮದವರ ಸೇವೆಯನ್ನು ನೋಡುವಾಗ ಕಣ್ಣಲ್ಲಿ ನೀರು ಬರುತ್ತಿದ್ದು ಇಲ್ಲಿನ ಆಶ್ರಮವಾಸಿಗಳ ಸೇವೆ ಮಾಡುತ್ತಿರುವ ಸಿಬ್ಬಂದಿಗಳ ಅರ್ಪಣಾಭಾವದ ಮನಸ್ಸು ದೇವರಿಗೆ ಪ್ರಿಯವಾಗಿದೆ ಎಂದು ಅಭಿಪ್ರಾಯಪಟ್ಟರು. ಬಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಬಳಂಜ ಮಾತನಾಡಿ ಯು. ಸಿ.ಪೌಲೋಸ್ ರವರು ಯೇಸು ಕ್ರಿಸ್ತರು ಸಾರಿದ ಅನಾಥರ, ನಿರ್ಗತಿಕರ ಸೇವೆಯನ್ನು ಮಾಡುತ್ತಿರುವ ದೊಡ್ಡ ಮಾನವತಾವಾದಿ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆಶ್ರಮದ ಸಮನ್ವಯ ಅಧಿಕಾರಿ ರಿತೇಶ್ ರವರು ಆಶ್ರಮದ ವ್ಯವಸ್ಥೆ ಮತ್ತು ಇಲ್ಲಿನ ಖರ್ಚು ವೆಚ್ಚ, ದಾನಿಗಳ ನೆರವಿನ ಕುರಿತು ಮಾಹಿತಿ ನೀಡಿದರು.

ಅಕ್ಷತಾ ಮತ್ತು ಇತರ ಸಿಬ್ಬಂದಿಗಳು ಎಲ್ಲಾ ವಾರ್ಡ್ ಗಳಿಗೆ ಮಂಡಳಿಯ ಸದಸ್ಯರನ್ನು ಕರೆದುಕೊಂಡು ಹೋಗಿ ಅಶ್ರಮವಾಸಿಗಳ ಪರಿಚಯ ಮತ್ತು ಅವರ ನೈಜ ಪರಿಸ್ಥಿತಿಗಳನ್ನು ವಿವರಿಸಿದರು. ಸಿಯೊನ್ ಅಶ್ರಮದಲ್ಲಿರುವ 400ಕ್ಕೂ ಹೆಚ್ಚು ಆಶ್ರಮವಾಸಿಗಳನ್ನು ಹಾಗೂ ಅಲ್ಲಿನ ಆಡಳಿತ ಮಂಡಳಿಯ ಸೇವೆಯನ್ನು ಗುರುತಿಸಿ ಆಶ್ರಮಕ್ಕೆ ಹತ್ತು ಸಾವಿರ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಯು.ಸಿ.ಪೌಲೋಸ್ ಮತ್ತು ಮೇರಿ ದಂಪತಿಗಳನ್ನು ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.ಇದರ ಜೊತೆಗೆ ಮಂಡಳಿಯ ಸದಸ್ಯರಿಂದ ಒಂದು ಗಂಟೆಯ ಕುಣಿತ ಭಜನೆ, ಮಿಮಿಕ್ರಿ, ಯಕ್ಷಗಾನದ ಹಾಡು, ನೃತ್ಯ ವೈಭವ ವನ್ನು ಸಹ ಆಶ್ರಮವಾಸಿಗಳ ಮುಂದೆ ನಡೆಸಿ ಅವರ ಮನಸ್ಸನ್ನು ಖುಷಿ ಪಡಿಸಲಾಯಿತು. ಮಂಡಳಿಯ ಅಧ್ಯಕ್ಷರಾದ ಕು.ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ತರಬೇತುದಾರರಾದ ಕು.ಮಾನ್ಯ,ಮಂಡಳಿಯ ಪೋಷಕರು ಉಪಸ್ಥಿತರಿದ್ದರು.

Related posts

ನಾವೂರು ಗ್ರಾ.ಪಂ. ಅಧ್ಯಕ್ಷರಾಗಿ ಸುನಂದಾ, ಉಪಾಧ್ಯಕ್ಷರಾಗಿ ಪ್ರಿಯಾ ಲಕ್ಷ್ಮಣ್ ಆಯ್ಕೆ

Suddi Udaya

ಶಿಬರಾಜೆ: ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಶಾಲೆತ್ತಡ್ಕ ಸ. ಪ್ರೌಢಶಾಲೆಗೆ ಚೇಯರ್ ಕೊಡುಗೆ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

Suddi Udaya

ಗುರುವಾಯನಕೆರೆಯಲ್ಲಿ ಅಪರಿಚಿತ ಶವ ಪತ್ತೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya
error: Content is protected !!