ಗುರುವಾಯನಕೆರೆ: ಭಕ್ತರ ಪಾಲಿನ ಕಾರಣಿಕ ಕ್ಷೇತ್ರವಾಗಿ, ಅಜಿಲ ಸೀಮೆಯಲ್ಲಿ ಕಲಿಯುಗದ ಕೈಲಾಸವೆಂದೇ ಹೆಗ್ಗಳಿಕೆ ಪಡೆದಿರುವ ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಫೆ.9ರಿಂದ ಆರಂಭಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಫೆ.11ರಂದು ಬೆಳಿಗ್ಗೆ ಅರಮಲೆ ಬೆಟ್ಟಕ್ಕೆ ಭೇಟಿ ನೀಡಿದರು.
ಅರೆಮಲೆಬೆಟ್ಟ ಕ್ಷೇತ್ರಕ್ಕೆ ಆಗಮಿಸಿದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರನ್ನು ಕ್ಷೇತ್ರದ ವತಿಯಿಂದ ಅನುವಂಶಿಕ ಆಡಳಿತದಾರ ಸುಖೇಶ್ ಕುಮಾರ್ ನೇತೃತ್ವದಲ್ಲಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ಬ್ರಹ್ಮಕುಂಭಾಭಿಷೇಕ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ನವಶಕ್ತಿ, ಬ್ರಹ್ಮಕುಂಭಾಭಿಷೇಕ ಸಮಿತಿಯ ಕಾರ್ಯಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ, ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ವಾತ್ಸಲ್ಯ , ಸುನೀಶ್ ಕುಮಾರ್ ಕಡಂಬು, ಸಂತೋಷ್ ಕುಮಾರ್ ಜೈನ್ , ಪ್ರಮುಖರಾದ ಸುನೀಶ್ ಕುಮಾರ್, ಆನಂದ ಶೆಟ್ಟಿ ವಾತ್ಸಲ್ಯ, ಸಂತೋಷ್ ಕುಮಾರ್ ಜೈನ್ ಪಡಂಗಡಿ, ರಾಜೇಶ್ ಶೆಟ್ಟಿ ನವಶಕ್ತಿ, ಶಶಿರಾಜ್ ಶೆಟ್ಟಿ, ವಸಂತ ಗೌಡ ವರಕಬೆ, ರಾಜಪ್ಪ ಶೆಟ್ಟಿ
ಸುಧೇಕ್ಕಾರ್, ಸೀತಾರಾಮ ಶೆಟ್ಟಿ ವೈಭವ್, ಯುವರಾಜ್ ಜೈನ್, ಆನಂದ ಕೋಟ್ಯಾನ್, ವಿತೇಶ್ ಜೈನ್, ಪ್ರದೀಪ್ ಶೆಟ್ಟಿ, ಆಶಾಲತಾ, ಸುಭಾಷ್ ಚಂದ್ರ ಜೈನ್ ಶ್ರೀ ಸ್ವಸ್ತಿಕ್, ಸಾಯಿ ಕುಮಾರ್ ಶೆಟ್ಟಿ ನವಶಕ್ತಿ, ಗೋಪಿನಾಥ್ ನಾಯಕ್, ರಕ್ಷೀತ್ ಪಣೆಕ್ಕರ್, ರಾಮಚಂದ್ರ ಶೆಟ್ಟಿ, ಸುಧಾಮಣಿ, ಪ್ರಿಯಾ ಹೆಗ್ಡೆ, ಶ್ರೀಮತಿ ಮಂಗಳಾ, ಪ್ರಜ್ವಲ್ ಶೆಟ್ಟಿ ಪಾಡ್ಯಾರು, ನಾರಾಯಣ ಪೂಜಾರಿ, ರಮಾನಂದ ಸಾಲ್ಯಾನ್,
ಮಧುರಾಜ್ ಹಾಗೂ ವಿತೇಶ್ ಜೈನ್ ಪಡಂಗಡಿ, ಮಮತಾ ಶೆಟ್ಟಿ, ರಮಾನಂದ ಸಾಲ್ಯಾನ್,ನಾರಾಯಣ ಆಚಾರ್ಯ ಬರಾಯ, ವಿತೇಶ್ ಬಂಗೇರ, ನಿತಿನ್ ಬಂಗೇರ ಬರಾಯ, ಕ್ಷೇತ್ರದ ಭಕ್ತರು, ಊರಿನ ನಾಗರಿಕರು, ಎಕ್ಸೆಲ್ ಕಾಲೇಜಿನ ಶಿಕ್ಷಕ ವೃಂದದರು ಉಪಸ್ಥಿತರಿದ್ದರು.
ನಾಳೆ ಕುಂಭಾಭಿಷೇಕ :
ಫೆ 12ರಂದು ಬೆಳಿಗ್ಗೆ ಗಣಹೋಮ, ಶುಭ ಮುಹೂರ್ತದಲ್ಲಿ ದೈವ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶಾಭಿಷೇಕ, ಪರಿಕಲಶಾಭಿಷೇಕ, ಕುಂಭ ಸಂಕ್ರಮಣದ, ಕುಂಭಲಗ್ನದಲ್ಲಿ ಪ್ರಧಾನ ಕುಂಭಾಭಿಷೇಕ ಪೂಜೆ, ಪಂಚ ಪರ್ವ ಪೂಜೆ, ಧ್ವಜಾರೋಹಣ, ಬಲಿ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಉತ್ಸವ. ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರಗಲಿರುವುದು.