ಪಡಂಗಡಿ :ಇಲ್ಲಿಯ ಓಡೀಲು ಎಂಬಲ್ಲಿ ದಿನಸಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಘಟನೆ ಫೆ.10 ರಂದು ರಾತ್ರಿ ನಡೆದಿದೆ.
ಹರೀಶ್ ಕುಲಾಲ ಎಂಬುವರಿಗೆ ಸೇರಿದ ದಿನಸಿ ಅಂಗಡಿ ಇದಾಗಿದ್ದು, ಫೆ.10ರಂದು ರಾತ್ರಿ ಕಳ್ಳರು ಬೀಗ ಮುರಿದು, ಶಟರ್ ತೆರೆದು ಒಳನುಗ್ಗಿ ನಗದು ಸೇರಿ, ಹಲವರು ವಸ್ತುಗಳ ಕಳ್ಳತನ ಮಾಡಿದ್ದಾರೆ.
ಇಂದು ಮುಂಜಾನೆ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕೃತ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನು ತಿಳಿದು ಬರಬೇಕಿದೆ.