ನಾರಾವಿ:ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಭಾರಿಸಿ ಮತ್ತೊಮ್ಮೆ ಅಧಿಕಾರವನ್ನು ತನ್ನದಾಗಿಸಿಕೊಂಡಿದೆ.
![](https://suddiudaya.com/wp-content/uploads/2025/02/naravi-winning.jpg)
ಎರಡನೇ ಭಾರಿಗೆ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಸುಧಾಕರ ಭಂಢಾರಿ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಹೆಗ್ಡೆ ಆಯ್ಕೆಯಾಗಿದ್ದು ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ನೂತನ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.
![](https://suddiudaya.com/wp-content/uploads/2025/02/naravi-win.jpg)
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ನಾರಾವಿ ಗ್ರಾ.ಪಂ ಅಧ್ಯಕ್ಷ ರಾಜವರ್ಮ ಜೈನ್,ಬಿಜೆಪಿ ಪ್ರಮುಖರಾದ ಮೋಹನ್ ಅಂಡಿಂಜೆ, ಉದಯ ಹೆಗ್ಡೆ ನಾರಾವಿ, ನಾರಾಯಣ ಪೂಜಾರಿ ಸುಲ್ಕೇರಿ,ಅಬಿಜಿತ್ ಜೈನ್,ಅಣ್ಣಾಜಿ,ವಸಂತ ಆಚಾರ್ಯ,ನಾರಾಯಣ ಪೂಜಾರಿ,ವಿಖಿತ್ ಶೆಟ್ಟಿ, ಸರಿತಾ ನಾರಾವಿ,ಜಾನು ಪೂಜಾರಿ,ಸಂತೋಷ್ ಮರ್ದೋಟ್ಟು,ಸಂತೋಷ್ ಹೆಗ್ಡೆ ಸಾವ್ಯ,ರತ್ನಾಕರ ಬಡೆಕ್ಕಳ,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.