26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಗಂಡಿಬಾಗಿಲು : ಇಲ್ಲಿಯ ಸಿಯೋನ್ ಆಶ್ರಮದಲ್ಲಿ ಅ.10 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಸಂಸ್ಥೆಯ ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ.ಯವರು ಅಲಂಕರಿಸಿದ್ದರು. ಅತಿಥಿಗಳಾಗಿ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಹರಿದಾಸ್ ಎಸ್.ಎಂ.ರವರು ಮಾತನಾಡಿ ಮಾನಸಿಕ ಕಾಯಿಲೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಕಾರ್ಯಕಾರ ಸದಸ್ಯರುಗಳಾದ ಅಡ್ವಕೇಟ್ ಶಿವಕುಮಾರ್ ಬಿ.ಎಸ್.ರವರು ಮಾತನಾಡಿ ಮಾನಸಿಕ ಅಸ್ವಸ್ಥರನ್ನು ಸಾಕಿ ಸಲಹುತ್ತಿರುವ ಸಿಯೋನ್ ಆಶ್ರಮದ ಕೆಲಸ ಕಾರ್ಯಗಳು ಶ್ಲಾಘನೀಯ ಎಂದರು. ಸಿಯೋನ್ ಆಶ್ರಮದ ಮ್ಯಾನೇಜರ್ ಸಂದ್ಯಾಸುಭಾಷ್ ರವರು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಸಂಸ್ಥೆಯ ವೈದ್ಯರಾದ ಶಿವಾನಂದ ಸ್ವಾಮಿಯವರು ಮಾನಸಿಕ ಕಾಯಿಲೆ ಬರಬಹುದಾದ ಸಾಧ್ಯತೆಗಳ ಕಾರಣಗಳು, ವಿಧಗಳು, ಲಕ್ಷಣಗಳು, ಪರಿಹಾರಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ರೆಡ್ ಕ್ರಾಸ್ ಸೊಸೈಟಿ ಕಾರ್ಯಕಾರ ಸದಸ್ಯೆ ಶ್ರೀಮತಿ ಸುಕನ್ಯರವರು, ಸಂಸ್ಥೆಯ ಟ್ರಸ್ಟೀ ಸದಸ್ಯರಾದ ಸುಭಾಷ್ ಯು.ಪಿ., ಆಶ್ರಮ ನಿವಾಸಿಗಳಾದ ರಾಜು ಮತ್ತು ಜಯಂತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಸಿಯೋನ್ ಅಶ್ರಮದ ನಿವಾಸಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿಯವರು, ಸಿಬ್ಬಂದಿವರ್ಗದವರು, ಆಶ್ರಮನಿವಾಸಿಗಳೆಲ್ಲರೂ ಉಪಸ್ಥಿತರಿದ್ದರು.

ಸಂಸ್ಥೆಯ ಸಿಬ್ಬಂದಿಯವರಾದ ಶ್ರೀಮತಿ ಸಿಂಧು ವಿ.ಎಮ್.ರವರು ಕಾರ್ಯಕ್ರಮ ನಿರೂಪಿಸಿದರು. ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಶಾಖೆಯ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

Related posts

ಅಕ್ರಮ ಗೋಸಾಗಾಟ : ತಡೆಯಲು ಬಂದವರ ಮೇಲೆ ಪಿಕಪ್ ಹರಿಸಿದ ದುಷ್ಕರ್ಮಿಗಳು

Suddi Udaya

ಡಿವೈಎಫ್ಐ ಯಿಂದ ಹಳ್ಳಿಂಗೇರಿ ಸರಕಾರಿ ಶಾಲಾ ಬಾವಿಯ ಸ್ವಚ್ಚತಾ ಶ್ರಮದಾನ

Suddi Udaya

ಗೇರುಕಟ್ಟೆ ಮೋಕ್ಷಧಾಮ ಹಿಂದು ರುದ್ರ ಭೂಮಿ ವಾಸ್ತು ಪೂಜೆ, ಲೋಕಾರ್ಪಣೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ಆಶ್ರಯದಲ್ಲಿ ಇಕೋಫ್ರೆಶ್ ಎಂಟರ್‌ ಪ್ರೈಸಸ್ ಬೆಳ್ತಂಗಡಿ-ಪುತ್ತೂರು ಇದರ ಸಹಯೋಗದೊಂದಿಗೆ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ

Suddi Udaya

ಅಳದಂಗಡಿ: ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಪುಸ್ತಕ ವಿತರಣಾ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲರಿಗೆ ಪೌರ ಸನ್ಮಾನ ಪೂರ್ವಭಾವಿ ಸಭೆ

Suddi Udaya

ಬೆಳ್ತಂಗಡಿ ಹಳೆಕೋಟೆ ಎಂಬಲ್ಲಿ ಮನೆಯೊಂದರಿಂದ‌ ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಲಕ್ಷ ‌ ನಗದು ಕಳವು

Suddi Udaya
error: Content is protected !!