April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಉತ್ಕೃಷ್ಟ ಶೈಕ್ಷಣಿಕ ಸಾಧನೆ,ಅಭಿನಂದಿಸಿದ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ : ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳು

ಬೆಳ್ತಂಗಡಿ: ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆ.ಇ.ಇ. ಮೇನ್ಸ್ 2024-25 ನೇ ಸಾಲಿನ ಮೊದಲ ಹಂತದ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ಕೃಷ್ಟ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಮೊಹಮ್ಮದ್ ಅಯ್ಮಾನ್ ಶೇ.99.2389953, ಪ್ರವಾನ್ ಪೊನ್ನಪ್ಪ ಶೇ.99.5808498, ನಿಶಾಂತ್ ಜೈನ್ ಶೇ.99.2168221, ಅನುಜ್ ಕೆ.ಎಸ್. ಶೇ 98.9591427, ಅರುಲ್ ಡಿಸೋಜಾ ಶೇ.98.9623029, ಮಹಮ್ಮದ್ ಸಫ್ವಾನ್ ಶೇ.98.8225410, ಸುಧನ್ವ ಶೇ.98.9342361 ಪರ್ಸಂಟೇಲ್ ಗಳಿಸುವುದರೊಂದಿಗೆ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

ಜೆ ಇ ಇ ಪರೀಕ್ಷೆ ಬರೆದ 256 ವಿದ್ಯಾರ್ಥಿಗಳ ಪೈಕಿ 211 ವಿದ್ಯಾರ್ಥಿಗಳು ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅರ್ಹರಾಗಿ ಅಡ್ವಾನ್ಸ್ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ , ಪ್ರಾಂಶುಪಾಲರು, ಹಾಗೂ ಬೋಧಕ , ಬೋಧಕೇತರ ಸಿಬ್ಬಂದಿ ಮತ್ತು ಆಡಳಿತ ಮಂಡಳಿಯು ಅಭಿನಂದನೆಯನ್ನು ಕೋರಿದ್ದಾರೆ.

Related posts

ಅಥ್ಲೆಟಿಕ್ಸ್ ಕ್ರೀಡಾಕೂಟ: ಕೊಯ್ಯೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಅಭಿನಂದನ್ ಹರೀಶ್ ಕುಮಾರ್ ಮತ್ತಿತರರ ವಿರುದ್ಧದ ಸಮನ್ಸ್ ಗೆ ಜಿಲ್ಲಾ ನ್ಯಾಯಾಲಯದಿಂದ ತಡೆ

Suddi Udaya

ಬಳಂಜ ವಾಲಿಬಾಲ್ ಕ್ಲಬ್ ಗೆ ಸುರೇಶ್ ಪೂಜಾರಿ ಹೇವರವರಿಂದ ಚಾಂಪಿಯನ್ ಟ್ರೋಫಿ ಹಸ್ತಾಂತರ

Suddi Udaya

ಲಾಯಿಲ : ಸವಣಾಲು ಆಯಿಲ ರಸ್ತೆಯ ಕತ್ಪಾಜೆಯಲ್ಲಿ ಗುಡ್ಡ ಕುಸಿತ: ಲಾಯಿಲ ಗ್ರಾ.ಪಂ. ವತಿಯಿಂದ ಎಚ್ಚರಿಕೆ ಫಲಕ ಅಳವಡಿಕೆ: ಘನ ವಾಹನಗಳ ಸಂಚಾರ ನಿರ್ಬಂಧ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಶೀಲಾವತಿ ನಿಧನ

Suddi Udaya

ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!