ಅಳದಂಗಡಿ : ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ( ರಿ )ಅಳದಂಗಡಿ ಇದರ 2023 -2024ನೇ ಸಾಲಿನ ವಾರ್ಷಿಕ ಮಹಾಸಭೆಯು ಫೆ.11 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಭಾರತಿಯವರ ಅಧ್ಯಕ್ಷತೆಯಲ್ಲಿ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು.
![](https://suddiudaya.com/wp-content/uploads/2025/02/aladangady2-2.jpg)
ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಮ್.ಬಿ.ಕೆ ಹರ್ಷಲಾ ಒಕ್ಕೂಟದ ವಾರ್ಷಿಕ ವರದಿ ಮಂಡನೆ ಹಾಗೂ ಒಕ್ಕೂಟದ ಜಮಾ ಖರ್ಚು ನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ತಾಲೂಕು ಬ್ಲಾಕ್ ಮ್ಯಾನೇಜರ್ ನಿತೇಶ್ ಒಕ್ಕೂಟದ ವಾರ್ಷಿಕ ಮಹಾಸಭೆ ಬಗ್ಗೆ, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ತಾಲೂಕು ವಲಯ ಮೇಲ್ವಿಚಾರಕ ಸ್ವಸ್ತಿಕ್ ವಾರ್ಷಿಕ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಈ ವೇಳೆ ಒಕ್ಕೂಟ ದಡಿಯಲಿ ರಚನೆಯಾದ ಸಹನಾ ಸಂಜೀವಿನಿ ಗುಂಪಿನ ಸದಸ್ಯರಾದ ಮೈಮುನ ಇವರು ಮನೆಯಲ್ಲಿಯೇ ತಯಾರಿಸಿದಂತಹ ಸಹನಾ ಸಂಜೀವಿನಿ ಸೋಪ್ ಆಯಿಲ್, ದೀಪಶ್ರೀ ಶಕ್ತಿ ಗುಂಪಿನ ಸದಸ್ಯರಾದ ಪ್ರೇಮ ಜೈನ್ ಅವರು ಮನೆಯಲ್ಲಿಯೇ ತಯಾರಿಸಿದ ಕಷಾಯ ಹುಡಿ, ಹಾಗೂ ಲಕ್ಷ್ಮಿ ಸಂಜೀವಿನಿ ಗುಂಪಿನ ಸದಸ್ಯರಾದ ಶಾಲಿನಿ ಜೈನ್ ಇವರು ಮನೆಯಲ್ಲಿ ತಯಾರಿಸಿದಂತಹ ಮಾವಿನ ಉಪ್ಪಿನಕಾಯಿಯನ್ನು ಬಿಡುಗಡೆ ಮಾಡಲಾಯಿತು.
ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ, ಗೌರವಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಒಕ್ಕೂಟದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಶುಭಲಕ್ಸ್ಮಿ ಸಂಜೀವಿನಿ ಗುಂಪಿನ ಅಧ್ಯಕ್ಷೆ ಸ್ವಾತಿ ನಿರೂಪಿಸಿ, ಎಲ್.ಸಿ.ಆರ್.ಪಿ ಆಶಾ ಸ್ವಾಗತಿಸಿದರು. ಕೃಷಿ ಸಖಿ ಜಾನೆಟ್ ಡಿ ಸೋಜಾ ಧನ್ಯವಾದವಿತ್ತರು.