27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ ಅಕ್ಷಯ ನಗರ ಗೆಳೆಯರ ಬಳಗದ ರಜತ ಸಂಭ್ರಮಾಚರಣೆ

ಕಲ್ಮಂಜ: ಗೆಳೆಯರ ಬಳಗ ಅಕ್ಷಯನಗರ ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆ.9 ರಂದು ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.

ರವಿ ಟಿ ಕಂದೂರು ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ನಿಡಿಗಲ್ ಶ್ರೀ ಶಾಂತಿನಾಥ ಜೈನ ಬಸದಿ ಆಡಳಿತ ಮೊಕ್ತೇಸರರು ರತನ್ ಕುಮಾರ್ ಜೈನ್ ಹುಣಿಪ್ಪಾಜೆ ಗುತ್ತು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ರಜತ ಸಂಭ್ರಮ ಸಮಿತಿ ಅಧ್ಯಕ್ಷ ಉಮೇಶ್ ಪೂಜಾರಿ , ಗೆಳೆಯರ ಬಳಗ ಅಧ್ಯಕ್ಷ ಸುಬ್ರಾಯ ಅಕ್ಷಯನಗರ ಸಭಾಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಸಂಚಾಲಕರು ನಾಮ್ ದೇವ್ ರಾವ್ , ಪ್ರವೀಣ್ ಫೆರ್ನಾಂಡೀಸ್ ಉದ್ಯಮಿಗಳು ಹಳ್ಳಿ ಮನೆ ಉಜಿರೆ, ಧರ್ಮಸ್ಥಳ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ, ಉಜಿರೆ ಮಂಜುಶ್ರೀ ಪ್ರಿಂಟರ್ಸ್ ಮ್ಯಾನೇಜರ್ ಶೇಖರ್ ಟಿ, ವಿಶೇಷ ಸಂಪನ್ಮೂಲ ಶಿಕ್ಷಕರು ಶ್ರೀಮತಿ ಸೀತಾ ಆರ್ ಶೇಠ್ , ಮಂಗಳೂರು ಅಪ್ಪೆ ಕಲ್ಲುರ್ಟಿ ವರ್ತೆ ಸೇವಾ ಸಂಘದ ಅಧ್ಯಕ್ಷ ವಿಜಯ್ ಕಾಸರಗೋಡು, ಅಕ್ಷಯ ನಗರ ಗೆಳೆಯರ ಬಳಗ ಸಂಚಾಲಕರು ಶೀನ, ಸ ಹಿ ಪ್ರಾ ಶಾಲೆ ಕಲ್ಮಂಜ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಹಮೀದ್ ಬಿ ಎನ್, ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಕೊಳ್ತಿಗೆ ನಾರಾಯಣ ಗೌಡ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗೆಳೆಯರ ಬಳಗವನ್ನು ಕಟ್ಟಿ ಬೆಳೆಸಿರುವ ಹಿರಿಯ ಸಲಹೆಗಾರರಿಗೆ, ಹಿರಿಯ ಸದಸ್ಯರಿಗೆ, ಕಳೆದ 25 ವರ್ಷಗಳಲ್ಲಿ ಬಳಗವನ್ನು ಮುನ್ನಡೆಸಿದ ಎಲ್ಲಾ ಅಧ್ಯಕ್ಷರುಗಳಿಗೆ, ಹಾಗೂ ಭಾರತೀಯ ಸೇನೆಯ ನಿವೃತ್ತ ವೀರ ಯೋಧ ಮಂಜುನಾಥ ನಾಯ್ಕ ರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.

ರಜತ ಸಂಭ್ರಮದ ಅಂಗವಾಗಿ ನಡೆದ ಕ್ರೀಡಾಕೂಟದ ಬಹುಮಾನ ವಿತರಣೆ ಮಾಡಲಾಯಿತು. ಊರಿನವರ ಉತ್ತಮ ಸಹಕಾರ ದಾನಿಗಳ ಕೊಡುಗೆ ಹಾಗೂ ಗೆಳೆಯರ ಬಳಗದ ಸರ್ವ ಸದಸ್ಯರ ಕಠಿಣ ಪರಿಶ್ರಮದಿಂದ 25 ಸಂವತ್ಸರವನ್ನು ಯಶಸ್ವಿಯಾಗಿ ಪೂರೈಸಿರುವ ಗೆಳೆಯರ ಬಳಗದ ರಜತ ಸಂಭ್ರಮ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮಕ್ಕಳಿಂದ ಹಾಗೂ ಊರವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಬದ್ ಕ್ ದ ಬಿಲೆ ಎಂಬ ತುಳು ನಾಟಕ ಹಾಗೂ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸಿದ ತುಳು ಹಾಸ್ಯಮಯ ನಾಟಕ ‘ರಂಗಭೂಮಿ’ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ನೆಲ್ಸನ್ ಮೋನಿಸ್ ಅಕ್ಷಯನಗರ ಹಾಗೂ ಶ್ರೀಮತಿ ಯಶೋಧ ಪಿ ಕಾರ್ಯಕ್ರಮ ನಿರೂಪಿಸಿದರು.

Related posts

ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣ ಖಂಡನೀಯ : ರಕ್ಷಿತ್ ಶಿವರಾಂ

Suddi Udaya

ನಾವೂರು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಕಳೆಂಜ ರಾಜು ಜೋಸೆಫ್ ಅವರ ಸಾವು ಪ್ರಕರಣ ಯಾವುದೋ ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಮಗನಿಂದ ಠಾಣೆಗೆ ದೂರು

Suddi Udaya

ಕೊಕ್ಕಡ: ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯಲ್ಲಿ ನಡೆದ ಮಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆ: ಕಾರ್ಯಕರ್ತರಿಗೆ ಅಭಿನಂದನೆ

Suddi Udaya

ಇತ್ತೀಚೆಗೆ ಸುಟ್ಟು ಕರಕಲಾದ ಸ್ವಸ್ತಿಕ್ ಆಟೋ ಶೋರೂಮ್ ಗೆ ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ವತಿಯಿಂದ ಸಹಾಯಧನ

Suddi Udaya
error: Content is protected !!