ನಿಡ್ಲೆ: ಕರ್ನಾಟಕ ಸರಕಾರವು ಫೆ. 12ರಿಂದ 14ರವರೆಗೆ ರಾಜ್ಯದ ಪ್ರಮುಖ ಹೂಡಿಕೆದಾರರ ಸಭೆಯಾದ ಇನ್ವೆಸ್ಟ್ ಕರ್ನಾಟಕ 2025 ಆಯೋಜಿಸಿದ್ದು ಅದರಲ್ಲಿ ದೇಶದ ನಂಬರ್ ಒನ್ ಹಾಳೆ ತಟ್ಟೆ ಉತ್ಪಾದಕರು ಮತ್ತು ರಫ್ತುದಾರರಾದ ಬರಂಗಾಯ ನಿಡ್ಲೆಯ ಅಗ್ರಿಲೀಫ್ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಭಾಗವಹಿಸುತ್ತಿದೆ.
ಅಗ್ರಿಲೀಫ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು ಇತ್ತೀಚಿಗೆ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆಗಳನ್ನೊಳಗೊಂಡ ವಿಸ್ತೃತ ಘಟಕವನ್ನು ಉದ್ಘಾಟಿಸಿತ್ತು. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ 10 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಆಕರ್ಷಿಸುವ ಮತ್ತು ಸುಮಾರು 19 ದೇಶಗಳಿಂದ ಹೂಡಿಕೆದಾರರು ಭಾಗವಹಿಸುವ ನಿರೀಕ್ಷೆಯಿದೆ.