ಗುರುವಾಯನಕೆರೆ 110/33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಬೆಳ್ತಂಗಡಿ 33/11ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33ಕೆವಿ ಲೈನಿನಲ್ಲಿ ಶಿಥಿಲಗೊಂಡಿರುವ ಜಂಪರ್‌ಗಳ ಬದಲಾವಣೆ ಹಾಗೂ ಇನ್ನಿತರ ತುರ್ತು ನಿರ್ವಹಣೆ ಕೆಲಸವನ್ನು ಹಮ್ಮಿಕೊಂಡಿರುವುದರಿಂದ,
ಫೆ.13 ರಂದು ಬೆಳಿಗ್ಗೆ ಗಂಟೆ 10:00ರಿಂದ ಸಂಜೆ ಗಂಟೆ 5:00ರ ತನಕ ಕೊಲ್ಲಿ, ಬಂಗಾಡಿ, ಕೊಯ್ಯೂರು, ಉಜಿರೆ, ಬೆಳಾಲು, ಪಟ್ರಮೆ, ಟೆಂಪಲ್, ನಿಡ್ಲೆ, ಕನ್ಯಾಡಿ, ಅರಸಿನಮಕ್ಕಿ ಹಾಗೂ ಪುದುವೆಟ್ಟು 11ಕೆವಿ ಫೀಡರುಗಳ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ ಆಗಲಿದೆ.