ವೇಣೂರು: ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣದ ಆರೋಪಿ ಬಂಟ್ವಾಳ ಸಜಿಪನಡು ನಿವಾಸಿ ಜುಮಾರ್ ಎಂಬಾತನಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 1 ವರ್ಷ ಕಾರಾಗೃಹ ಹಾಗೂ 10 ಸಾವೀರ ರೂ.ದಂಡ ವಿಧಿಸಿ . ಫೆ.11 ರಂದು ಆದೇಶ ನೀಡಿದೆ.
ಪ್ರಕರಣ ವಿವರ: ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ನೆರೆಯ ಸಂಬಂಧಿಯೊಂದಿಗೆ ಗೋಳಿಯಂಗಡಿಯ ಐ.ಟಿ.ಐಗೆ ಹೋಗುತ್ತಿರುವ ಸಮಯ ಆರೋಪಿತ ದಿನಾಲೂ ಹಿಂಬಾಲಿಸಿಕೊಂಡು ಬರುತ್ತಿದ್ದುದಲ್ಲದೆ , ಬೈಕ್ ನಿಲ್ಲಿಸಿ ಬೈಕ್ ನಲ್ಲಿ ಬರುತ್ತೀರಾ, ನಿಮ್ಮ ಪೋನು ನಂಬ್ರ ಕೊಡಿ ಎಂದು ಕೇಳುತ್ತಿದ್ದು 2024 ಅ. 15 ರಂದು ಬೆಳಿಗ್ಗೆ ಸುಮಾರು 7.45 ಗಂಟೆಗೆ ಎಂದಿನಂತೆ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಸಂಬಂಧಿ ಯೊಂದಿಗೆ ಐಟಿಐಗೆ ನಡೆದುಕೊಂಡು ಹೋಗುವ ಸಮಯ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎಂಬಲ್ಲಿ ಆರೋಪಿತ ಜುಮಾರ್, ಅತನ ಬೈಕ್ ನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಾಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದು,ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಅ.ಕ್ರ: 77/2024 ಕಲಂ: 78 BNS-2023 ಮತ್ತು:ಕಲಂ;12 ಪೋಕ್ಸೋ ಕಾಯಿದೆ- 2012 ರಂತೆ ಪ್ರಕರಣ ದಾಖಲಾಗಿತ್ತು.
ಸದ್ರಿ ಪ್ರಕರಣದ ತನಿಖೆಯನ್ನು ನಡೆಸಿದ ವೇಣೂರು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಶೈಲ ಡಿ. ಮುರಗೋಡ್‌ರವರು ಜುಮಾರ್ ನನ್ನು ದಸ್ತಗಿರಿ ಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪ್ರಕರಣಕ್ಕೆ ಸಂಬಂದಿಸಿದ ಪೂರಕ ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಆರೋಪಿತನ ವಿರುದ್ದ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಸದ್ರಿ ಪ್ರಕರಣದಲ್ಲಿ ಒಟ್ಟು18 ಸಾಕ್ಷಿಧಾರರನ್ನು ಹೊಂದಿದ್ದು,
ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ವೆಂಕಟೇಶ್ ಎ ಎಸ್ ಐ ವೇಣೂರು ಠಾಣೆ, ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಸಮನ್ಸ್‌ಗಳನ್ನು ಪಿಸಿ ಈರಾ ನಾಯ್ಕ್‌ರವರು, ಸೆಷನ್ಸ್ ನ್ಯಾಯಾಲಯದ ಕರ್ತವ್ಯವನ್ನು ಕಾಲವ್ ರವರು ನಿವ೯ಹಿಸಿದರು. ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಸಹನಾ ದೇವಿ ರವರು ವಾದಿಸಿರುತ್ತಾರೆ.