ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಳದಂಗಡಿ ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಅಳದಂಗಡಿ : ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ( ರಿ )ಅಳದಂಗಡಿ ಇದರ 2023 -2024ನೇ ಸಾಲಿನ ವಾರ್ಷಿಕ ಮಹಾಸಭೆಯು ಫೆ.11 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಭಾರತಿಯವರ ಅಧ್ಯಕ್ಷತೆಯಲ್ಲಿ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಮ್.ಬಿ.ಕೆ ಹರ್ಷಲಾ ಒಕ್ಕೂಟದ ವಾರ್ಷಿಕ ವರದಿ ಮಂಡನೆ ಹಾಗೂ ಒಕ್ಕೂಟದ ಜಮಾ ಖರ್ಚು ನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು. ತಾಲೂಕು ಬ್ಲಾಕ್ ಮ್ಯಾನೇಜರ್ ನಿತೇಶ್ ಒಕ್ಕೂಟದ ವಾರ್ಷಿಕ ಮಹಾಸಭೆ ಬಗ್ಗೆ, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ತಾಲೂಕು ವಲಯ ಮೇಲ್ವಿಚಾರಕ ಸ್ವಸ್ತಿಕ್ ವಾರ್ಷಿಕ ಮಹಾಸಭೆಯ ಉದ್ದೇಶ ಮತ್ತು ಜವಾಬ್ದಾರಿಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಈ ವೇಳೆ ಒಕ್ಕೂಟ ದಡಿಯಲಿ ರಚನೆಯಾದ ಸಹನಾ ಸಂಜೀವಿನಿ ಗುಂಪಿನ ಸದಸ್ಯರಾದ ಮೈಮುನ ಇವರು ಮನೆಯಲ್ಲಿಯೇ ತಯಾರಿಸಿದಂತಹ ಸಹನಾ ಸಂಜೀವಿನಿ ಸೋಪ್ ಆಯಿಲ್, ದೀಪಶ್ರೀ ಶಕ್ತಿ ಗುಂಪಿನ ಸದಸ್ಯರಾದ ಪ್ರೇಮ ಜೈನ್ ಅವರು ಮನೆಯಲ್ಲಿಯೇ ತಯಾರಿಸಿದ ಕಷಾಯ ಹುಡಿ, ಹಾಗೂ ಲಕ್ಷ್ಮಿ ಸಂಜೀವಿನಿ ಗುಂಪಿನ ಸದಸ್ಯರಾದ ಶಾಲಿನಿ ಜೈನ್ ಇವರು ಮನೆಯಲ್ಲಿ ತಯಾರಿಸಿದಂತಹ ಮಾವಿನ ಉಪ್ಪಿನಕಾಯಿಯನ್ನು ಬಿಡುಗಡೆ ಮಾಡಲಾಯಿತು.

ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ, ಗೌರವಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಒಕ್ಕೂಟದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ಶುಭಲಕ್ಸ್ಮಿ ಸಂಜೀವಿನಿ ಗುಂಪಿನ ಅಧ್ಯಕ್ಷೆ ಸ್ವಾತಿ ನಿರೂಪಿಸಿ, ಎಲ್.ಸಿ.ಆರ್.ಪಿ ಆಶಾ ಸ್ವಾಗತಿಸಿದರು. ಕೃಷಿ ಸಖಿ ಜಾನೆಟ್ ಡಿ ಸೋಜಾ ಧನ್ಯವಾದವಿತ್ತರು.

Related posts

ವೇಣೂರು ನಿಟ್ಟಡೆಯ ಬಾಲಪ್ರತಿಭೆ ಯಶ್ವಿತ್ ಎಚ್.ಗೆ ಲಿಟಲ್ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ

Suddi Udaya

ತಾಲೂಕು ಮಟ್ಟದ ಸ್ಪರ್ಧೆ: ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ ಕಾಂಗ್ರೇಸ್ ಮಹಿಳಾ ಘಟಕದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ

Suddi Udaya

ಉಜಿರೆ: ಎಸ್‌ಡಿಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯ ಹಳೆ ವಿದ್ಯಾರ್ಥಿನಿ ಡಾ| ಶಿವಾನಿ ಎಂ.ಡಿ ರವರಿಗೆ ಅಭಿನಂದನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ

Suddi Udaya

ಸೋಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya
error: Content is protected !!