![](https://suddiudaya.com/wp-content/uploads/2025/02/kadir5.jpg)
ಕಡಿರುದ್ಯಾವರ : ಕಡಿರುದ್ಯಾವರ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿ ಒಂಟಿಸಲಗವು ದಾಳಿ ಮಾಡಿದ ಘಟನೆ ಫೆ.11 ರಂದು ರಾತ್ರಿ ನಡೆದಿದೆ.
![](https://suddiudaya.com/wp-content/uploads/2025/02/kadi5-520x1024.jpg)
![](https://suddiudaya.com/wp-content/uploads/2025/02/kadiru2.jpg)
![](https://suddiudaya.com/wp-content/uploads/2025/02/kadiru3.jpg)
ಫೆ.11 ರಂದು ರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಒಂಟಿಸಲಗವು ಕಡಿರುದ್ಯಾವರ ಗ್ರಾಮದ ಶೆಟ್ಟಿಪಾಲ್ ರಮೇಶ್ ಗೌಡರವರ 3 ತೆಂಗಿನ ಗಿಡಗಳನ್ನು ಹಾಳು ಮಾಡಿದ್ದು, ಹಾಗೂ ಸೀತಾರಾಮ ನಾಯಕ್ ನಿರೂಪಮ ನಾಯಕ್ ರವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ಅಡಿಕೆ ಗಿಡಗಳಿಗೆ ಹಾನಿ ಮಾಡಿ, ಮುಂದೆ ಜೋಸ್ ಪಳ್ಳಿಕ್ಕರ್ ಜಮೀನಿನ ಮೂಲಕ ಲಿಜೋ ಸ್ಕರಿಯ ರವರ ತೋಟಕ್ಕೆ ಹಾನಿ ಮಾಡಿದೆ. ನಂತರ ಕಾಡನೆಯು ಮೈಂದಡ್ಕ ದಿಂದ ಇಂದಬೆಟ್ಟು ಕಡೆ ತೆರಲಿದೆ.
![](https://suddiudaya.com/wp-content/uploads/2025/02/kadiru4-543x1024.jpg)