23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಂಗಡಿಯ ಪುಲಾಬೆಯಲ್ಲಿ ಬದ್ರಿಯಾ ಮಸ್ಜಿದ್ ಮತ್ತು ಮದರಸ ಉದ್ಘಾಟನೆ

ಬೆಳ್ತಂಗಡಿ: ತಾಜುಲ್ ಉಲಮಾ – ಶಂಶುಲ್ ಉಲಮಾ ಮುಂತಾದ ಅಗ್ರಗಣ್ಯ ವಿದ್ವಾಂಸರುಗಳ ಅನುಯಾಯುಗಳಾಗಿರುವ ನಾವು ಸಂಘಟನಾ ಭೇದವನ್ನು ಲೆಕ್ಕಿಸದೆ ಅವರು ತೋರಿಸಿಕೊಟ್ಟ ನೈಜ ಆದರ್ಶದಲ್ಲಿ ಮುನ್ನಡೆಯುವವರಾಗೋಣ. ಇಲ್ಲಿ ಇಸ್ಲಾಂನ ನೈಜ ಆದರ್ಶ ಮತ್ತು ಐಖ್ಯತೆ ಮೊದಲ ಆದ್ಯತೆಯಾಗಿದೆ ಎಂದು ಕುಪ್ಪೆಟ್ಟಿ ಮಸ್ಜಿದ್ ಖತಿಬ್ ಸಯ್ಯಿದ್ ಸಾದಾತ್ ತಂಙಳ್ ಹೇಳಿದರು.

ಹೊಸಂಗಡಿ ಗ್ರಾಮದ ಪುಲಾಬೆಯಲ್ಲಿ ನವೀಕೃತಗೊಂಡು ಉದ್ಘಾಟನೆಗೊಂಡ ಬದ್ರಿಯಾ ಮಸ್ಜಿದ್ ಮತ್ತು ಮದರಸ ಇದರ
ವಕ್ಫ್ ವಿಧಿ ಪೂರೈಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾರುನ್ನೂರು ಶಿಕ್ಷಣ ಮಹಾ ವಿದ್ಯಾಲಯದ ಚೇರ್ಮೆನ್, ದ.ಕ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ದುಆ ಆಶೀರ್ವಚನ ನೀಡಿದರು. ಮಸ್ಜಿದ್ ನಿರ್ಮಿಸುವಲ್ಲಿ ಕಾರಣರಾದ ಎಲ್ಲ ದಾನಿಗಳನ್ನೂ ಸ್ಮರಿಸಿದರು.
ಮಸ್ಜಿದ್ ನಿರ್ಮಾಣದಲ್ಲಿ ಗರಿಷ್ಟ ಆರ್ಥಿಕ ಸಹಕಾರ ನೀಡಿದ ಸೌದಿ ಅರೆಬಿಯಾದ ಟೌನ್ ಮುನ್ಸಿಪಟಲಿಟಿಯ ಮಾಜಿ ಚೇರ್ಮೆನ್ ಶೈಖ್ ಆದಿಲ್ ಅಲ್ ಮುಲ್‌ಹಿಂ ಮಾತನಾಡಿ, ದೇವರಬಿಚ್ಚೆಯಂತೆ ನಾನು ಇಲ್ಲಿಗೆ ಬರುವಂತಾಯಿತು. ಸಹಾಯ ಮಾಡುವಂತಾಯಿತು‌. ಇಲ್ಲಿ ಬಂದಾಗ ನನಗೆ ಬಹಳ ಖುಷಿ ಉಂಟಾಗಿದೆ. ನಿಮಗೆ ನಾನು ಇನ್ನೂ ಸಹಾಯ ಸಹಕಾರ ಮಾಡಲಿದ್ದೇನೆ ಎಂದರು. ಅವರ ಭಾಷಣವನ್ನು ಅವರ ಸಹೋದ್ಯೋಗಿ ಬೆಳ್ತಂಗಡಿ ನಿವಾಸಿ ಹೈದರ್ ಅಲಿ ಶಾಲಿಮಾರ್ ಲಿವರ್‌ಪೂಲ್ ಮಂಗಳೂರು ಅವರು ಬ್ಯಾರಿ ಭಾಷೆಗೆ ಭಾಷಾಂತರಿಸಿದರು.

ಸಮಾರಂಭದಲ್ಲಿ ಅರಬಿ ಅವರ ಸಹೋದರನ ಪುತ್ರ ಶೈಖ್ ಅಹ್ಮದ್ ಅದ್‌ನಾನ್ ಅಲ್ ಮುಲ್‌ಹಿಂ ಸೌದಿ ಅರೆಬಿಯಾ, ಶರಫುದ್ದೀನ್ ತಂಙಳ್ ಪಡ್ಡಂದಡ್ಕ, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಮೂಡಬಿದ್ರೆ, ಹಾಜಿ ಕೆ.ಎಮ್ ಉಮರ್ ಸಖಾಫಿ ಕಾಜೂರು, ಹಾಜಿ ಉಸ್ಮಾನ್ ತೋಡಾರ್, ಅಬ್ದುಲ್ ರಹಿಮಾನ್ ಮೂಡಬಿದ್ರೆ, ಹಾಜಿ ಮುಹಮ್ಮದ್ ಸೈಫುದ್ದೀನ್ ಪಾಣೆಮಂಗಳೂರು, ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಅಬ್ದುಲ್ ಕರೀಂ ಲಾಯಿಲ, ಖಾಲಿದ್ ಪುಲಾಬೆ, ಹೆಚ್ ಮುಹಮ್ಮದ್ ವೇಣೂರು, ಇಬ್ರಾಹಿಂ ಫೈಝಿ ಕುಪ್ಪೆಟ್ಟಿ, ಜಿ.ಎಮ್ ಕಾಮಿಲ್ ಸಖಾಫಿ, ಪಿ.ಪಿ ಅಹಮದ್ ಸಖಾಫಿ ಕಾಶಿಪಟ್ಣ, ಶಾಹುಲ್ ಹಮೀದ್ ಮೆಟ್ರೊ, ಫಕೀರಬ್ಬ ಮರೋಡಿ, ಅಬೂಸ್ವಾಲಿಹ್ ಹಾಸ್ಕೋ, ಇಕ್ಬಾಲ್ ಅಂಗರಕರಿಯ, ಪಿ.ಹೆಚ್ ಅಹಮದ್ ಹುಸೈನ್, ಶರೀಫ್ ಅಝ್ಹರಿ, ಮೂಸ ಮದನಿ, ಹೆಚ್ ಇಸ್ಮಾಯಿಲ್ ಗಾಂಧಿನಗರ, ನಿಯಾಝ್ ಫೈಝಿ, ರಿಯಾಝ್ ಅಂಗರಕರಿಯ, ಮುತ್ತಲಿಬ್ ಕುಂಡದಬೆಟ್ಟು, ಅಂಗರಕರಿಯ ಮಸ್ಜಿದ್ ಅಧ್ಯಕ್ಷ ನಝೀಮುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

ಮಸ್ಜಿದ್ ನಿರ್ಮಾಣದಲ್ಲಿ ಭಾಗಿಗಳಾದ ಇಂಜಿನಿಯರ್ ಸಲಾಲುದ್ದೀನ್ ಪುಲಾಬೆ, ಗುತ್ತಿಗೆದಾರ ಹಕೀಂ ಬಂಗೇರಕಟ್ಟೆ, ಇಂಟೀರಿಯರ್ ಮುಸ್ತಫಾ ಪುತ್ತೂರು, ಮರದ ಕೆಲಸದ ಹರೀಶ್ ಆಚಾರ್ಯ, ಮೇಸ್ತ್ರಿ ಸಾದಿಕ್ ನಾರಾವಿ, ಇಲೆಕ್ಟ್ರೀಷಿಯನ್ ಇಲ್ಯಾಸ್ ಕುರ್ಲೊಟ್ಟು, ಟೈಲ್ಸ್ ‌ನ ಶರೀಫ್ ಅಂಗರಕರಿಯ, ಪೈಂಟರ್ ರಶೀದ್ ಪುಲಾಬೆ ಅವರನ್ನು ಗೌರವಿಸಲಾಯಿತು.
ಊರಿನ ಹಿರಿಯರಾದ ಮುಹಮ್ಮದ್‌ಕುಂಞಿ ಅಂಗರಕರಿಯ, ಅಬೂಬಕ್ಕರ್ ಅಂಗರಕರಿಯ, ಉಮರಬ್ಬ ಬಲ್ಲಂಗೇರಿ ಮತ್ತು ಅಬ್ದುರ್ರಹ್ಮಾನ್ ಹೊಕ್ಕಾಡಿ ಇವರನ್ನು ಸನ್ಮಾನಿಸಲಾಯಿತು.


ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರಾಗಿ ಏಳಿಗೆಗಾಗಿ ಅವಿರತ ಶ್ರಮವಹಿಸುತ್ತಿರುವ ಆಲಿಯಬ್ಬ ಪುಲಾಬೆ ಮತ್ತು ಕಾರ್ಯದರ್ಶಿ ಹಾಗೂ ಮಸ್ಜಿದ್ ಗ್ ಜಾಗ ಕೊಡುಗೆ ನೀಡಿದ ಜಿ.ಎಮ್ ಅಚ್ಚಬ್ಬ ಹಾಜಿ ಅವರ ಪುತ್ರ ಜಿ.ಎಮ್ ಶಫೀಮ್, “ಅಲ್ ಇಶಾಮಿ” ಧಾರ್ಮಿಕ ಸ್ನಾತಕೋತ್ತರ ಪದವಿ ಪೂರೈಸಿದ ಮುಹಮ್ಮದ್ ಸೈಫುದ್ದೀನ್ ಮರ್ಝೂಕಿ ಪುಲಾಬೆ ಅವರಿಗೆ ಯಂಗ್‌ಮೆನ್ಸ್ ಹಾಗೂ ಯುವಕರ ವತಿಯಿಂದ ಗೌರವ ಸಲ್ಲಿಸಲಾಯಿತು.


ಆಡಳಿತ ಸಮಿತಿ ಅಧ್ಯಕ್ಷ ಆಲಿಯಬ್ಬ ಪುಲಾಬೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.‌ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬೆಲೆ ಏರಿಕೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ: ಮಲ್ಲೇಶ್ವರದಿಂದ ಬಂದ ಪುಡಾರಿಯಿಂದ ದ್ವೇಷದ ರಾಜಕಾರಣ: ಹರೀಶ್ ಪೂಂಜ ಆರೋಪ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ನಾಡಗೀತೆ, ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ

Suddi Udaya

ಶಿಶಿಲ: ಸೃಷ್ಟಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಾವೂರು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಬಿಲ್ಲವ ಸಂಘ ಬೇಹರಿನ್ ಅಧ್ಯಕ್ಷ ಹರೀಶ್ ಪೂಜಾರಿ

Suddi Udaya
error: Content is protected !!