September 6, 2026
ಆರೋಗ್ಯ

ಗುಂಡೂರಿಯ ‌ಶ್ರೀಗುರುಚೈತನ್ಯ ಸೇವಾ ಶ್ರಮದಲ್ಲಿ ವೇಣೂರಿನ ಡಾ| ಕೆ.ರವೀಂದ್ರ ಪ್ರಸಾದ್ ಇವರಿಂದ ವೈದ್ಯರ ಕೊಠಡಿಯ ಉದ್ಘಾಟನೆ

ಗುಂಡೂರಿ‌ : ಹಿರಿಯ ವೈದ್ಯ ಬಡಕೋಡಿ ಗುತ್ತು ಮನೆತನದ ವೇಣೂರಿನ ಡಾ| ಕೆ.ರವೀಂದ್ರ ಪ್ರಸಾದ್ ಇವರಿಂದ ಗುಂಡೂರಿಯ ‌ಶ್ರೀಗುರುಚೈತನ್ಯ ಸೇವಾಶ್ರಮದ ವೈದ್ಯರ ಕೊಠಡಿಯ ಉದ್ಘಾಟನೆ ಫೆ.9ರಂದು ನಡೆಯಿತು.
ಕರಿಮಣೇಲಿನ ಮೂಂಕಾಡಿಯ ರಾಮಚಂದ್ರ ನಾಯಕ್ ಮತ್ತು ಗೀತಾರವರ 40 ನೇ ವರುಷದ ವೈವಾಹಿಕ ಜೀವನದ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಸೇವಾಶ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮ ಕೇಳದ ಪೇಟೆ ವೈದಿಕರಾದ ಶ್ರೀಪತಿ ಭಟ್ ರವರಿಂದ ಗಣಹೋಮ ನಡೆದು ದಂಪತಿಗಳಿಗೆ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವೇಣೂರಿನ ಹಿರಿಯ ವೈದ್ಯ ಸರಳ ಸಜ್ಜನ ಈ ವೈದ್ಯರ ಮೂಲಕ ವೈದ್ಯರ ಕೊಠಡಿಯನ್ನು ಉದ್ಘಾಟಿಸಲಾಯಿತು ಮತ್ತು ಇವರನ್ನು ಸಂಮ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಂಗಳೂರಿನ ಉದ್ಯಮಿ ರಮೇಶ್ ನಾಯಕ್ ಹಾಗೂ ಇವರ ಧರ್ಮಪತ್ನಿ ಸುಚಿತ್ರಾ, ಗೋಳಿಯಂಗಡಿಯ ಸತ್ಯರಾಜ್ ಪರಿವಾರ್ ನ ಉದ್ಯಮಿ ಸತ್ಯೇಂದ್ರ ರಾವ್,ಉದ್ಯಮಿ ಭಾಸ್ಕರ ಪೈ, ಸುದತ್ ಜೈನ್,ಆರಂಬೋಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರಭಾಕರ ಹುಲಿಮೇರು, ಬಂಧುಮಿತ್ರರು ಉಪಸ್ಥಿತರಿದ್ದರು. ಮನೋರಂಜನೆಗಾಗಿ ಆಗ್ನಿದುರ್ಗೆ ರಸಮಂಜರಿ ತಂಡದಿಂದ ಸಂಗೀತ ಕಾರ್ಯಕ್ರಮ ವಿತ್ತು. ನಿವೃತ್ತ ಸೇನಾನಿ ರಾಮಚಂದ್ರ ನಾಯಕ್ ರವರು ಸ್ವಾಗತಿಸಿದರು ಶ್ರೀಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯರವರು ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಹಳೆಪೇಟೆ ಶಾಲೆಯಲ್ಲಿ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Suddi Udaya

ಜೂನ್ 7: ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ-ಉಡುಪಿ ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಯಕ್ಷಭಾರತಿ ಕನ್ಯಾಡಿಯಿಂದ ಕೇಶವ ಎಂ. ರವರಿಗೆ ಚಿಕಿತ್ಸಾ ನೆರವು

Suddi Udaya

ಜೂ.21: ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ವಿದ್ವತ್ ಕಾಲೇಜು ವಿದ್ಯಾರ್ಥಿಗಳಿಂದ ಯೋಗಾಚರಣೆ-ಯೋಗವು ದೇಹದ ಲವಲವಿಕೆಯ ಭಾಗ: ಡಾ.ರಿಶಿಕಾ ರೈ

Suddi Udaya

ಕಲ್ಮಂಜದಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮ

Suddi Udaya
error: Content is protected !!