ನಿಡ್ಲೆ: ಬರೆಂಗಾಯ-ನಿಡ್ಲೆ ವನದುರ್ಗಾರಾಧನೆ, ವರ್ಷಾವಧಿ ನೇಮ ಮತ್ತು ದೊಂಪದ ಬಲಿ ಉತ್ಸವವು ಫೆ.12 ಮತ್ತು ಫೆ.13ರಂದು ವಿಜೃಂಭಣೆಯಿಂದ ಜರುಗಲಿರುವುದು.
![](https://suddiudaya.com/wp-content/uploads/2025/02/nidle2.jpg)
ಫೆ.12ರಂದು ವನದುರ್ಗಾರಾಧನೆ, ಬ್ರಾಹ್ಮಣ ಸಂತರ್ಪಣೆ ಮತ್ತು ವನ ಭೋಜನ ಹಾಗೂ ರಾತ್ರಿ ಪಾಂಡೀಲು ಮನೆಯಿಂದ ಭಂಡಾರ ಹಿಡಿದು ಕೊಡಂಗೆ ಸ್ಥಾನದಲ್ಲಿ ಶ್ರೀ ಭಟಾರಿ ಯಾನೆ ಮಲೆದೇವತೆ ಸಹ ದೈವಗಳಿಗೆ ವರ್ಷಾವಧಿ ನೇಮ ಜರುಗಿತು.
![](https://suddiudaya.com/wp-content/uploads/2025/02/nidle3.jpg)
ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು, ನಿಡ್ಲೆ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು, ಸದಸ್ಯರು, ನಾಲ್ವಿಕೆಯರು ಹಾಗೂ ಊರವರು ಉಪಸ್ಥಿತರಿದ್ದರು.
![](https://suddiudaya.com/wp-content/uploads/2025/02/nidle4.jpg)
![](https://suddiudaya.com/wp-content/uploads/2025/02/nidle.jpg)
ಇಂದು( ಫೆ.13) ರಾತ್ರಿ ಕಲ್ಕುಡ ಗುಡ್ಡೆಯಲ್ಲಿ ಕಲ್ಕುಡ ವ್ಯಾಘ್ರ ಚಾಮುಂಡಿ ಹಾಗೂ ಸಹ ದೈವಗಳಿಗೆ ದೊಂಪದ ಬಲಿ ಉತ್ಸವ ಜರಗಲಿರುವುದು.