September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನೆ

ವೇಣೂರು: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಸಜೀಪ ಮೂಡ ಇದರ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನಾ ಸಮಾರಂಭವು ಫೆ.12 ರಂದು ನಡೆಯಿತು .

ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಇವರು ಈ ಸ್ಟಾಂಪಿಂಗ್ ಉದ್ಘಾಟಿಸಿ ಶುಭ ಹಾರೈಸಿದರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವೇಣೂರು ಇದರ ಪ್ರಬಂಧಕರಾದ ರಂಜಿತ್ ದೀಪ ಬೆಳಗಿಸಿದರು. ವೇಣೂರು ಜುಮ್ಮಾ ಮಸೀದಿ ಅಧ್ಯಕ್ಷ ಜಕ್ರೀಯ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಕೆ ಸಂಜೀವ ಪೂಜಾರಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿ ಇದರ ಸೇವೆಯನ್ನು ಎಲ್ಲ ಗ್ರಾಹಕರು ಪಡೆದುಕೊಂಡು ಸಂಘದಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸಿ ಸಂಘದ ಶ್ರೇಯೋಭಿವೃದ್ಧಿಗಾಗಿ ಸಹಕರಿಸಬೇಕಾಗಿ ವಿನಂತಿಸಿದರು. ವೇಣೂರು ಮೂರ್ತೆದಾರರ ಅಧ್ಯಕ್ಷ ರಮೇಶ್ ಪೂಜಾರಿ ,ವೆಂಕಟರಮಣ ಕೋ ಆಪರೇಟಿವ್ ವೇಣೂರು ಶಾಖಾ ವ್ಯವಸ್ಥಾಪಕ ಗಾಯನ್ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಸುಂದರ ಪೂಜಾರಿ, ರಮೇಶ್ ಅನ್ನಪ್ಪಾಡಿ, ಜಯಶಂಕರ ಕಾನ್ಸ್ ಲೆ, ಅರುಣ್ ಕುಮಾರ್ ಎಮ್, ಆಶಿಶ್ ಪೂಜಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ, ಎ ಜಿ ಎಂ ಶಿಲ್ಪಾ ಉಪಸ್ಥಿತರಿದ್ದರು. ನಿರ್ದೇಶಕರಾದ ಅರುಣ್ ಕುಮಾರ್ ಸ್ವಾಗತಿಸಿದರು, ಶಾಖಾ ವ್ಯವಸ್ಥಾಪಕರಾದ ವಿಜಯ. ಕೆ ವಂದಿಸಿದರು.

Related posts

ಆದಿ ಪಜಿರಡ್ಕದಲ್ಲಿ ಜಾತ್ರಾ ಮಹೋತ್ಸವ

Suddi Udaya

ಪುದುವೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

Suddi Udaya

ಉಜಿರೆ: ಮಾಚಾರು ಬಳಿ ಕಾರು -ಬೈಕ್ ಅಪಘಾತ: ಬೈಕ್ ಸವಾರನಿಗೆ ಗಾಯ

Suddi Udaya

ಮಚ್ಚಿನ: ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ್ ಮಚ್ಚಗುರಿ

Suddi Udaya

ಎ.18: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಎಸ್.ಡಿ.ಪಿ.ಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ನಾಮಪತ್ರ ಸಲ್ಲಿಕೆ

Suddi Udaya

ವೇಣೂರು ಭಗವಾನ್ ಶ್ರೀ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ: ಶ್ರೀ ಧ.ಮಂ. ಐಟಿಐ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯ

Suddi Udaya
error: Content is protected !!