ಉಜಿರೆ: ಇಲ್ಲಿನ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಉಜಿರೆಯ ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸರಕಾರಿ ಪದವಿಪೂರ್ವ ಕಾಲೇಜು , ಪ್ರೌಢ ಶಾಲೆ ವಿಭಾಗ ಗೇರುಕಟ್ಟೆ ಇಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಪ್ರಭಾರ ಪ್ರಾಂಶುಪಾಲರು ಅಮರೇಶ್ ಹೆಬ್ಬಾರ್ ವಹಿಸಿದ್ದರು. ಕುದ್ರೋಳಿ ನಾರಾಯಣಗುರು ಪ. ಪೂ ಕಾಲೇಜು ಉಪನ್ಯಾಸಕರು ಕೇಶವ ಬಂಗೇರ , ಕಳಿಯ ಗ್ರಾ ಪಂ ಉಪಾಧ್ಯಕ್ಷೆ ಶ್ರೀಮತಿ ಇಂದಿರಾ , ಸುರೇಂದ್ರ ಜೈನ್ ಕಳಿಯ ಬೀಡು , ಕಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಜನಾರ್ಧನ ಗೌಡ , ಗೇರುಕಟ್ಟೆ ಸ ಪ ಪೂ ಕಾ ಪ್ರೌಢಶಾಲೆ ಉಪ ಪ್ರಾಂಶುಪಾಲರು ಶ್ರೀಮತಿ ಈಶ್ವರಿ ಕೆ, ಗೇರುಕಟ್ಟೆ ಆಟೋ ಮಾಲಕರ ಸಂಘದ ಅಧ್ಯಕ್ಷ ಬದ್ರುದ್ದೀನ್ ಹಾಗೂ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ನ ಯೋಜನಾಧಿಕಾರಿಗಳಾದ ಪ್ರಕಾಶ್ ಗೌಡ ಹಾಗೂ ಉಪ ಯೋಜನಾಧಿಕಾರಿಗಳಾದ ಲೋಹಿತ್ ಮತ್ತು ಪುಷ್ಪಲತಾ ಪಿ ಉಪಸ್ಥಿತರಿದ್ದರು.
ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಗೇರುಕಟ್ಟೆ ಪ್ರೌಢಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಹಾಗೂ ಕಾಲೇಜು ನ ಹಳೆ ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳು ಭಾಗವಹಿಸಿದ್ದರು.