29.2 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಾರ್ಮಾಡಿ: ಅನ್ನಾರು ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾಡಾನೆ ಸಾವು

ಚಾರ್ಮಾಡಿ : ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತರಿಗುಡ್ಡ ಸಮೀಪದ ಅನ್ನಾರು ಎಂಬಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಕಾಡಾನೆ ಸಾವನ್ನಪ್ಪಿದ ಘಟನೆ ಫೆ.13 ರಂದು ರಾತ್ರಿ ನಡೆದಿದೆ.

ಚಾರ್ಮಾಡಿ-ಕನಪಾಡಿ ರಕ್ಷಿತಾರಣ್ಯ ಪ್ರದೇಶದ ಅನ್ನಾರು ಎಂಬಲ್ಲಿ ರಸ್ತೆಯಿಂದ ಸುಮಾರು 30 ಮೀ ದೂರದ ಕಾಡಿನಲ್ಲಿ ಅಂದಾಜು 25 ರಿಂದ 30 ವರ್ಷ ಪ್ರಾಯದ ಹೆಣ್ಣಾನೆ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದನ್ನು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗ ತಕ್ಷಣ ಸ್ಥಳಕ್ಕೆ ಧಾವಿಸಿ ಬಳಿಕ ಮಂಗಳೂರಿನಿಂದ ತಜ್ಞ ಪಶು ವೈದ್ಯರನ್ನು ಕರೆಯಿಸಿ ಕಾಡಾನೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.

ಸಂಪೂತ್ಯವಾಗಿ ಬಳಲಿರುವಂತೆ ಕಂಡುಬಂದಿರುವ ಕಾಡಾನೆ ಆಹಾರ ಸೇವಿಸಲು ಸಾಧ್ಯವಾಗದೆ ಅಥವಾ ಯಾವುದೋ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಂಡು ಬಂದಿತ್ತು. ರಾತ್ರಿ ಈ ಆನೆ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕಾಡಾನೆ ಯಾವರೀತಿ ಸಾವನ್ನು ಅಪ್ಪಿದೆ ಎಂಬುದು ಪೋಸ್ಟ್ ಮಾರ್ಟಂ ಬಳಿಕವೇ ತಿಳಿದು ಬರಬೇಕಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲಿದ್ದು ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಕಾಡಾನೆ ಜನವಸತಿ ಪ್ರದೇಶದ ಸಮೀಪ ಸಾವನ್ನಪ್ಪಿದ್ದು ಅರಣ್ಯ ಇಲಾಖೆಯವರು ಎಲ್ಲ ರೀತಿಯ ಪರಿಶೀಲನೆಗಳನ್ನು ನಡೆಸಿದ ಬಳಿಕವಷ್ಟೇ ಆನೆಯ ಮೃತದೇಹದ ದಹನ ಕಾರ್ಯ ಮಾಡಲಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ ಸಂಸ್ಥೆಯ ಸಿ.ಇ.ಒ ಭೇಟಿ

Suddi Udaya

ಬಳಂಜ ಗ್ರಾ.ಪಂ ನೂತನ‌ ಅಧ್ಯಕ್ಷೆ,ಉಪಾಧ್ಯಕ್ಷ ರಿಗೆ ಬಿಜೆಪಿಯಿಂದ ಅಭಿನಂದನಾ ಕಾರ್ಯಕ್ರಮ

Suddi Udaya

36ನೇ ಮಹಿಳಾ ವಿಭಾಗದ ಜೂನಿಯರ್ ನ್ಯಾಷನಲ್ ನೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ ಕರ್ನಾಟಕ ತಂಡಕ್ಕೆ ತೃತೀಯ ಸ್ಥಾನ ಎಸ್ ಡಿ ಎಂ ಕಾಲೇಜಿನ 2 ವಿದ್ಯಾರ್ಥಿನಿಯರ ಸಾಧನೆ

Suddi Udaya

ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಮಾಜಮುಖಿ ಕಾರ್ಯಕ್ಕೆ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್-2023

Suddi Udaya

ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್‌ ಕುಮಾ‌ರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಉಜಿರೆ: ಬದ್ರಿಯಾ ಜುಮ್ಮಾ ಮಸೀದಿ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!