ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತರಿಗುಡ್ಡ ಸಮೀಪದ ಅನ್ನಾರು ಎಂಬಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಕಾಡಾನೆ ಸಾವನ್ನಪ್ಪಿದ ಘಟನೆ ಹಿನ್ನಲೆ ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು.

25 ರಿಂದ 30 ವರ್ಷದ ಹೆಣ್ಣು ಆನೆ ಆಗಿದ್ದು , ಕಳೆದ ಎರಡು ತಿಂಗಳಿಂದ ಸರಿಯಾದ ಆಹಾರ ಸೇವಿಸುತ್ತಿರಲ್ಲಿಲ್ಲ ಎನ್ನಲಾಗಿದೆ . ಆನೆಯ ದೇಹದ ಹೊರಗಡೆ ಯಾವುದೇ ಗಾಯವಿಲ್ಲ ದೇಹದ ಒಳಗೆ ಬಹು ಅಂಗಾಂಗ ವೈಫಲ್ಯ ಇರುವುದು ಕಂಡು ಬಂದಿದೆ ಎಂದು ಡಿಎಫ್ಓ ಮಾಹಿತಿ ನೀಡಿದರು.

ಭದ್ರತಾ ದೃಷ್ಟಿಯಿಂದ ಆನೆಯ ಎರಡು ದಂತವನ್ನು ತೆಗೆದು ಬೆಳ್ತಂಗಡಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.
ಬೆಳ್ತಂಗಡಿ ಡಾ. ರವಿ ಕುಮಾರ್.ಎಮ್, ಚಾರ್ಮಾಡಿ ಡಾ.ಯತೀಶ್ ಕುಮಾರ್.ಎಮ್.ಎಸ್ ಮರಣೋತ್ತರ ಪರೀಕ್ಷೆ ನಡೆಸಿದರು.

ಡಿಎಫ್ಓ ಅಂಥೋಣಿ ಮರಿಯಪ್ಪ, ಎಸಿಎಫ್ ಕ್ಷೀಫರ್ಡ್ ಲೋಬೋ, ಆರ್.ಎಫ್.ಓ ಟಿ.ಎನ್.ತ್ಯಾಗರಾಜ್, ಚಾರ್ಮಾಡಿ ಡಿ.ವೈ.ಆರ್.ಎಫ್.ಓ ನಾಗೇಶ್.ಪಿ.ಜಿ. ಬೆಳ್ತಂಗಡಿ ಡಿ.ವೈಆರ್.ಎಫ್.ಓ ರವಿಚಂದ್ರ.ಕೆ, ಗಸ್ತು ಅರಣ್ಯ ಪಾಲಕ ರವಿ,ಪರಶುರಾಮ, ಅರಣ್ಯ ವೀಕ್ಷಕರಾದ ಗೋಪಾಲ, ಕಿಟ್ಟಣ್ಣ, ಮನೋಹರ್,ಅನಿಲ್. , ಸ್ಥಳೀಯರಾದ ಸ್ನೇಕ್ ಅನಿಲ್, ಮುಂಡಾಜೆ ಸಚಿನ್ ಭೀಡೆ,ಜನಾರ್ದನ, ಕೃಷ್ಣಪ್ಪ ಭಾಗಿಯಾಗಿದ್ದರು.
ಆನೆಯನ್ನು ಸ್ಥಳದಲ್ಲಿಯೇ ಹಿಟಾಚಿ ಮೂಲಕ ದಫನ ಮಾಡಲಾಯಿತು.