ಪುಂಜಾಲಕಟ್ಟೆ: ಸರಕಾರಿ ಪ್ರೌಢಶಾಲೆ ನಯನಾಡು ಇಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಬೆಂಗಳೂರಿನ ಯಸ್ಕಾವ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ರಮೇಶ್ ಶೆಟ್ಟಿ ಕುಮಂಗಿಲ ಇವರು ತಮ್ಮ ಕಂಪೆನಿಯ ಸಿಎಸ್ಆರ್ ನಿಧಿ ಮೂಲಕ ಕೊಡುಗೆಯಾಗಿ ನೀಡಿದ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಭಾಗವಹಿಸಿ ಶುಭ ಹಾರೈಸಿದರು. ಯಸ್ಕಾವ ಕಂಪೆನಿಯವರು ನೀಡಿದ ಸ್ಮಾರ್ಟ್ ಕ್ಲಾಸ್, ಡೆಸ್ಕ್‌ಟಾಪ್, ಇನ್ವರ್ಟರ್, ಪ್ರಾಜೆಕ್ಟರ್, ಪ್ರಿಂಟರ್, ಮತ್ತು ಕುರ್ಚಿಗಳು ಮುಂತಾದ ಸುಮಾರು ನಾಲ್ಕು ಲಕ್ಷ ಮೌಲ್ಯದ ವಸ್ತುಗಳನ್ನು ಕಂಪೆನಿಯ ಹೆಚ್ ಆರ್ ಮೆನೇಜರ್ ರಾಜೇಶ್ ಇವರು ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಜಯಶೀಲ ಇವರಿಗೆ ಹಸ್ತಾಂತರಿಸಿದರು.


ಯಸ್ಕಾವ ಕಂಪೆನಿಯ ಪ್ರಮುಖರಾದ ಮಹೇಶ್ ಕುಮಾರ್, ಪುನೀತ್, ಶ್ರೀಕಾಂತ್ ಉಪಸ್ಥಿತರಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಮತ್ತು ಯಸ್ಕಾವ ಕಂಪೆನಿಯ ಪ್ರೊಡಕ್ಷನ್ ಮೆನೇಜರ್ ರಮೇಶ್ ಶೆಟ್ಟಿಯವರು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿ ,ಶಾಲೆಯ ಅಭಿವೃದ್ಧಿಗೆ ಇನ್ನಷ್ಟು ಸಹಕಾರದ ಭರವಸೆ ನೀಡಿದರು. ಪಿಲಾತ್ತಬೆಟ್ಟು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ರತ್ನಾಕರ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದ್ರಶೇಖರ್ ಶೆಟ್ಟಿ, ಶುಭಕರ್ ಶೆಟ್ಟಿ, ಹರೀಶ್ ಪೂಜಾರಿ ಕಜೆ , ಹರೀಶ್ ಶೆಟ್ಟಿ ಕುಮೇರು ಮತ್ತು ಶಾಲಾ ಎಸ್ಡಿಎಂಸಿ ಸದಸ್ಯರು ಭಾಗವಹಿಸಿದ್ದರು.