ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚಾರ್ಮಾಡಿ: ಅರಣ್ಯ ಇಲಾಖೆಯಿಂದಸತ್ತ ಆನೆಯ ದಫನ: ಆನೆಯ ಎರಡು ದಂತ ಸ್ವಾಧೀನ ಪಡಿಸಿಕೊಂಡ ಅಧಿಕಾರಿಗಳು

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ತರಿಗುಡ್ಡ ಸಮೀಪದ ಅನ್ನಾರು ಎಂಬಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಕಾಡಾನೆ ಸಾವನ್ನಪ್ಪಿದ ಘಟನೆ ಹಿನ್ನಲೆ ತಜ್ಞ ಪಶು ವೈದ್ಯರು ಆನೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದರು.

25 ರಿಂದ 30 ವರ್ಷದ ಹೆಣ್ಣು ಆನೆ ಆಗಿದ್ದು , ಕಳೆದ ಎರಡು ತಿಂಗಳಿಂದ ಸರಿಯಾದ ಆಹಾರ ಸೇವಿಸುತ್ತಿರಲ್ಲಿಲ್ಲ ಎನ್ನಲಾಗಿದೆ ‌. ಆನೆಯ ದೇಹದ ಹೊರಗಡೆ ಯಾವುದೇ ಗಾಯವಿಲ್ಲ ದೇಹದ ಒಳಗೆ ಬಹು ಅಂಗಾಂಗ ವೈಫಲ್ಯ ಇರುವುದು ಕಂಡು ಬಂದಿದೆ ಎಂದು ಡಿಎಫ್ಓ ಮಾಹಿತಿ ನೀಡಿದರು.

ಭದ್ರತಾ ದೃಷ್ಟಿಯಿಂದ ಆನೆಯ ಎರಡು ದಂತವನ್ನು ತೆಗೆದು ಬೆಳ್ತಂಗಡಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ‌.

ಬೆಳ್ತಂಗಡಿ ಡಾ. ರವಿ ಕುಮಾರ್.ಎಮ್, ಚಾರ್ಮಾಡಿ ಡಾ.ಯತೀಶ್ ಕುಮಾರ್.ಎಮ್.ಎಸ್ ಮರಣೋತ್ತರ ಪರೀಕ್ಷೆ ನಡೆಸಿದರು.

ಡಿಎಫ್ಓ ಅಂಥೋಣಿ ಮರಿಯಪ್ಪ, ಎಸಿಎಫ್ ಕ್ಷೀಫರ್ಡ್ ಲೋಬೋ, ಆರ್.ಎಫ್.ಓ ಟಿ.ಎನ್.ತ್ಯಾಗರಾಜ್, ಚಾರ್ಮಾಡಿ ಡಿ.ವೈ.ಆರ್.ಎಫ್‌.ಓ ನಾಗೇಶ್.ಪಿ.ಜಿ. ಬೆಳ್ತಂಗಡಿ ಡಿ.ವೈಆರ್.ಎಫ್.ಓ ರವಿಚಂದ್ರ.ಕೆ, ಗಸ್ತು ಅರಣ್ಯ ಪಾಲಕ ರವಿ,ಪರಶುರಾಮ, ಅರಣ್ಯ ವೀಕ್ಷಕರಾದ ಗೋಪಾಲ, ಕಿಟ್ಟಣ್ಣ, ಮನೋಹರ್,ಅನಿಲ್. , ಸ್ಥಳೀಯರಾದ ಸ್ನೇಕ್ ಅನಿಲ್, ಮುಂಡಾಜೆ ಸಚಿನ್ ಭೀಡೆ,ಜನಾರ್ದನ, ಕೃಷ್ಣಪ್ಪ ಭಾಗಿಯಾಗಿದ್ದರು‌.

ಆನೆಯನ್ನು ಸ್ಥಳದಲ್ಲಿಯೇ ಹಿಟಾಚಿ ಮೂಲಕ ದಫನ‌ ಮಾಡಲಾಯಿತು.

Related posts

ಬೆಳಾಲು ಶ್ರೀ ಧ.ಮಂ.ಅ. ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿ ಸ್ವಚ್ಛತಾ ಕಾರ್ಯ

Suddi Udaya

ಮಡಂತ್ಯಾರು: ಬಂಗೇರಕಟ್ಟೆ ನೆತ್ತರ ರಸ್ತೆಯ ದುರಸ್ತಿಯ ಬಗ್ಗೆ ಕಾಲ್ನಡಿಗೆಯಲ್ಲಿ ಪ್ರತಿಭಟನೆ

Suddi Udaya

ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡಮಾಡಲ್ಪಡುವ ಹವ್ಯಕ ವೇದರತ್ನ ಪ್ರಶಸ್ತಿಗೆ ವೇದಮೂರ್ತಿ ವೆಂಕಟೇಶ ಶಾಸ್ತ್ರಿಯವರು ಆಯ್ಕೆ

Suddi Udaya

ನೆರಿಯ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಜೂ.21: “ಪ್ರಭು ಸ್ವೀಟ್ಸ್” 2ನೇ ಫ್ಯಾಕ್ಟರಿ ಔಟ್‌ಲೆಟ್ ಗುರುವಾಯನಕೆರೆಯಲ್ಲಿ ಶುಭಾರಂಭ

Suddi Udaya
error: Content is protected !!