April 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪುತ್ತಿಲ ನಡುಕೇಯ೯ ತರವಾಡು ಟ್ರಸ್ಟ್‌ನಿಂದ ಕೊಯ್ಯೂರು ರಾಮಣ್ಣ ಪೂಜಾರಿ ದಂಪತಿಗೆ ಸನ್ಮಾನ

ಪುತ್ತಿಲ: ಪುತ್ತಿಲ ಗ್ರಾಮದ ನಡುಕೇಯ೯ ತರವಾಡು ಟ್ರಸ್ಟ್ ಆಶ್ರಯದಲ್ಲಿ ಫೆ. 9 ಆದಿತ್ಯವಾರದಂದು ಮೂಲ ತರವಾಡು ಮನೆಯಲ್ಲಿ ನಾಗತಂಬಿಲ ದೈವಗಳಿಗೆ ಪರ್ವ ಸೇವೆ, ಅಗೇಲು ಸೇವೆ ಹಾಗೂ ತರವಾಡು ಟ್ರಸ್ಟ್‌ನ ಸಭೆ ಟ್ರಸ್ಟ್ ಅಧ್ಯಕ್ಷ ಆನಲೆ ಶೇಖರ ಪೂಜಾರಿರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.


ಇದೇ ಸಂದರ್ಭದಲ್ಲಿ ಕುಟುಂಬದ ಹಿರಿಯರೂ, ಯಜಮಾನರಾದ ಕೇರ್ಯ ರಾಮಪ್ಪ ಪೂಜಾರಿಯವರನ್ನೂ, ಕುಟುಂಬದ ಸದಸ್ಯರಾದ ಡಾ| ರಿತೇಶ್ ಕುಮಾರ್‌ರವರ ಬಾಬ್ತು ಅವರ ಹೆತ್ತವರಾದ ಕೆ.ರಾಮಣ್ಣ ಪೂಜಾರಿ ಕೊಯ್ಯೂರು ಮತ್ತು ಶಾಂತಿ ದಂಪತಿ ಹಾಗೂ ಕ್ರೀಡಾಪಟು ಲಿಶನ್ ಪುರಿಯ, ಸುಪ್ರೀತ್ ನಡುಕೇರ ಇವರನ್ನು ಸನ್ಮಾನಿಸಲಾಯಿತು. ಅಕ್ಷಿತಾ ಬೇನಪ್ಪು ಸನ್ಮಾನ ಪತ್ರ ವಾಚಿಸಿದರು. ದೈವಗಳಿಗೆ ಪರಿಚಾಲಕರಾಗಿ ಜಯಾನಂದ ಆನ ಸೇವೆಗೈದರು. ಕಾರ್ಯಕ್ರಮ ಸಂಯೋಜಕರಾದ ಸತೀಶ್ ಮಿತ್ತೇರಿಪಾದೆ ಸ್ವಾಗತಿಸಿ, ಚಂದ್ರಶೇಖರ ಮಿತ್ತೇರಿಪಾದೆ ವಂದಿಸಿದರು. ಕುಟುಂಬಸ್ಥರು ಭಾಗವಹಿಸಿದ್ದರು.
ವರದಿ:ಕೆ. ರಾಮಣ್ಣ ಪೂಜಾರಿ

Related posts

ಅರಸಿನಮಕ್ಕಿ ಪರಿಸರದಲ್ಲಿ ತೋಟಗಳಿಗೆ ಕಾಡಾನೆ ದಾಳಿ: ಕೃಷಿ ಸೋತ್ತುಗಳ ನಾಶ.

Suddi Udaya

ತುಮಕೂರಿನಲ್ಲಿ ‘ಜಿ.ಎನ್.ಆರ್ ಕಲ್ಪತರು ಸಿರಿ ಮಾರ್ಟ್’ ಸಿರಿ ಉತ್ಪನ್ನಗಳ ನೂತನ ಮಾರಾಟ ಮಳಿಗೆ ಶುಭಾರಂಭ

Suddi Udaya

ಶಿಶಿಲ: ಸೃಷ್ಟಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಕರ್ನಾಟಕ ರಾಜ್ಯ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ಮೈಸೂರು ಜಿಲ್ಲಾ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಸ್ಪರ್ಧೆಯಲ್ಲಿ ಎಸ್ ಡಿ ಎಮ್ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Suddi Udaya

ಇಚಿಲಂಪಾಡಿ ಬೆಕ್ಕಿನ ಮರಿಯನ್ನು ನುಂಗಿದ ನಾಗರಹಾವು: ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಸ್ನೇಕ್ ಪ್ರಕಾಶ್

Suddi Udaya
error: Content is protected !!