ಬೆಳ್ತಂಗಡಿ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾರ್ಚ್ 5 ರಂದು ನೆರವೇರಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ.22 ರಂದು ಫೆ.23ರಂದು ನೆರವೇರಲಿರುವ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ. ಈ ಪ್ರಯುಕ್ತ ಬೆಳ್ತಂಗಡಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರೆಕಾಣಿಕೆ ಸಮರ್ಪಣೆ ನಡೆಸಲು ಚಿಂತಿಸಲಾಗಿದೆ ಎಂದು ತಾಲೂಕು ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ ಹೇಳಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.೨೫ ರಿಂದ ಮಾರ್ಚ್ ೫ ರವರೆಗೆ ನೆರವೇರಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.೨೨ ರಂದು ಬೆಳ್ತಂಗಡಿ ತಾಲೂಕಿನಿಂದ ಹೊರಡಲಿರುವ ಬೃಹತ್ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ ಪ್ರಯುಕ್ತ ಫೆ.೧೪ ರಂದು ಬೆಳ್ತಂಗಡಿ ಲಯನ್ಸ್ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಫೆ.೨೨ ರಂದು ಬೆಳ್ತಂಗಡಿ ತಾಲೂಕಿನ ಭಕ್ತರು ಹಸಿರುವಾಣಿ ಹೊರೆಕಾಣಿಕೆಯೊಂದಿಗೆ ಗುರುವಾಯನಕೆರೆ ಬಂಟರ ಭ ವನಕ್ಕೆ ಬಂದು ಸೇರುವುದು. ಅಲ್ಲಿಂದ ಜತೆಯಾಗಿ ಕಾಪು ಅಮ್ಮನ ಬಳಿಗೆ ಮೆರವಣಿಗೆ ಮೂಲಕ ಸಾಗಲಾಗುವ ಬಗ್ಗೆ ಸಭೆ ಯಲ್ಲಿ ಚ ರ್ಚಿಸಲಾಯಿತು. ಫೆ.೨೨ ರಂದು ದ.ಕ. ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ, ಮಂಗಳೂರು, ಮೂಡುಬಿದರೆ, ಮೂಲ್ಕಿ ಹಾಗೂ ಆ ಭಾಗದ ವಿವಿದ ಪ್ರದೇಶಗಳಿಂದ ಹಸಿರುವಾಣಿ ಹೊರೆಕಾಣಿಕೆ ತೆರಳುವುದು.
ಹೊರೆಕಾಣಿಕೆ ನೀಡುವವರು ಮಹಾ ಅನ್ನಸಂತರ್ಪಣೆಗೆ ಬೇಕಾಗುವ ಅಕ್ಕಿ (ಸ್ವಸ್ತಿಕ್ ಬ್ರ್ಯಾಂಡ್), ತೆಂಗಿನಕಾಯಿ, ಸೀಯಾಳ, ಸಕ್ಕರೆ, ಬೆಲ್ಲ, ತೆಂಗಿನ ಎಣ್ಣಿ, ನಂದಿನಿ ತುಪ್ಪ, ತೊಗರಿ ಬೇಳೆ, ಉದ್ದಿನ ಬೇಳೆ (ಪಿಕಾಕ್ ಬ್ರ್ಯಾಂಡ್), ದವಸ ದಾನ್ಯಗಳು, ಸಂಬಾರ ದಿನಸಿಗಳು, ತರಕಾರಿ, ಹಣ್ಣು-ಹಂಪಲು, ಬಾಳೆ ಎಲೆ, ಹಾಳೆ ತಟ್ಟೆ ಹಾಗೂ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ವಿನಿಯೋಗವಾಗುವ ಅಡುಗೆ ಪರಿಕರ ಹಾಗೂಇನ್ನಿತರ ಪರಿಕರಗಳನ್ನು ನೀಡಬಹುದಾಗಿದೆ ಎಂದು ಹೇಳಿದರು.
ಈವೇಳೆ ಲಯನ್ಸ್ ಕ್ಲಬ್ ಬೆಳ್ತಂಗಡಿ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಹಿಬರೋಡಿ, ತಾಲೂಕ್ ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ..ಕಾರ್ಯದರ್ಶಿ ತುಕಾರಾಂ ಮನೋಹರ್ ಬಳೆಂಜ .ಚೈತ್ರೇಶ್ ಇಳಂತಿಲ ಸಹಸಂಚಾಲಕರುಗಳಾದ ಮಮತಾ ಶೆಟ್ಟಿ, ನವೀನ್ ನೆರಿಯ, ಪಿಡಿಒ ಮೋಹನ್ ಬಂಗೇರ, ಆಶಾಸತೀಶ್ ಆಚಾರ್ಯ ಸುಕನ್ಯಾ ಭಗೀರಥ.ಶಂಕರ್ ರಾವ್,ಪುಷ್ಪವತಿ ಆರ್ ಶೆಟ್ಟಿ ಉಜಿರೆ , ಪುಷ್ಪರಾಜ್ ಶೆಟ್ಟಿ, ಸಂತೋಷ ಸಾಲಿಯಾನ್ ಕಾಪಿನಡ್ಕ ವಿಶ್ವನಾಥ್ ಲಾಯಿಲ…ಸುಬ್ಬಣ್ಣ ಭಟ್ ಸಹಿತ ಇತರರು ಉಪಸ್ಥಿತರಿದ್ದರು.