ಬೆಳ್ತಂಗಡಿ: ಪುತ್ತಿಲ ಗ್ರಾಮದ ನಡುಕೇರ್ಯ ತರವಾಡು ಟ್ರಸ್ಟ್ ಆಶ್ರಯದಲ್ಲಿ ಫೆ.9 ರಂದು ಮೂಲ ತರವಾಡು ಮನೆಯಲ್ಲಿ ನಾಗತಂಬಿಲ ದೈವಗಳಿಗೆ ಪರ್ವ ಸೇವೆ, ಅಗೇಲು ಸೇವೆ ಹಾಗೂ ತರವಾಡು ಟ್ರಸ್ಟ್ ನ ಸಭೆಯನ್ನು ಶೇಖರ ಪೂಜಾರಿ ಆನಲ್ಕೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಕೇರ್ಯ ರಾಮಪ್ಪ ಪೂಜಾರಿಯವರನ್ನು ಕುಟುಂಬದ ಸದಸ್ಯರಾದ ಡಾ| ರಿತೇಶ್ ಕುಮಾರ್ ರವರ ಬಾಬ್ತು ಅವರ ಪೋಷಕರಾದ ಕೆ. ರಾಮಣ್ಣ ಪೂಜಾರಿ ಮತ್ತು ಶಾಂತಿ ಕೇರ್ಯ, ಕು| ಲಿಶನ್ ಹಾಗೂ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಸಹಕಾರ ಸಂಘದ ಉದ್ಯೋಗಿ ನಡುಕೇರ್ಯ ಸುಪ್ರೀತ್ ಕೆ ಇವರನ್ನು ಎಲ್ಲರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಅಕ್ಷಿತಾ ಬೇನಪ್ಪು ಸನ್ಮಾನ ಪತ್ರ ವಾಚಿಸಿದರು.


ದೈವಗಳಿಗೆ ಪರಿಚಾಲಕರಾಗಿ ಜಯಾನಂದಾ ನಲ್ಕೆ ಸೇವೆಗೈದರು ಕಾರ್ಯಕ್ರಮ ಸಂಯೋಜಕರಾದ ಸತೀಶ್ ಮಿತ್ತೇರಿಪಾದೆ ಸ್ವಾಗತಿಸಿ , ಚಂದ್ರಶೇಖರ ಮಿತ್ತೇರಿಪಾದೆ ವಂದಿಸಿದರು. ಕುಟುಂಬಸ್ಥರು ಭಾಗವಹಿಸಿದ್ದರು. ಹಾಗೆಯೇ ರಾತ್ರಿ ವೇಳೆ ನಡುಕೇರ್ಯ ತರವಾಡು ಟ್ರಸ್ಟ್ ನಿಂದ ಸಭೆ ನಡೆಯಿತು.