ಬೆಳ್ತಂಗಡಿ : ಗುರುವಾಯನಕೆರೆಯ ಕೆರೆಯಲ್ಲಿ ಫೆ.9 ರಂದು ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದ್ದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಮೃತದೇಹವನ್ನು ಮಂಗಳೂರು ಕೆ.ಎಸ್.ಹೆಗ್ಡೆ ಶವಗಾರದಲ್ಲಿ ಇಡಲಾಗಿದೆ.

ಸುಮಾರು 5.3 ಅಡಿ ಇದ್ದು, ಸಾಧಾರಣ ಶರೀರ,ಉರುಟು ಮುಖ,ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಮೀಸೆ ಮತ್ತು ಗಡ್ಡ ಹಾಗೂ ಕಪ್ಪು ಬಿಳಿ ಮಿಶ್ರಿತ 2 ಇಂಚು ಇದ್ದ ತಲೆ ಕೂದಲು ಇದ್ದು. ಮೃತದೇಹ ಸಿಕ್ಕಿದಾಗ ದೇಹದ ಮೇಲೆ ಹಳದಿ ಕಪ್ಪು ಗೆರೆಯ ಟೀ ಶರ್ಟದ, ನೀಲಿ ಕಪ್ಪು ಬಣ್ಣದ ಬರ್ಮುಡ ಚಡ್ಡಿ ಧರಿಸಿದ್ದರು. ಈ ಮೃತದೇಹದ ಗುರುತು ಇನ್ನೂ ಪತ್ತೆಯಾಗದೆ ಇದ್ದು. ಗುರುತು ಪತ್ತೆಗಾಗಿ ಬೆಳ್ತಂಗಡಿ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಮೃತದೇಹದ ಗುರುತು ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08256-232093 ಅಥವಾ 9480805370 ನಂಬರನ್ನು ಸಂಪರ್ಕಿಸಲು ಸೂಚಿಸಿದ್ದಾರೆ.