September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ: ತಾಲೂಕು ಮಟ್ಟದ ಮಂದಿರ ಅಧಿವೇಶನ

ಲಾಯಿಲ: ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಾಲೂಕು ಮಟ್ಟದ ಮಂದಿರ ಅಧಿವೇಶನದ ಉದ್ಘಾಟನಾ ಕಾರ್ಯಕ್ರಮವು ಫೆ.15ರಂದು ಲಾಯಿಲ ಶ್ರೀ ಸುಬ್ರಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನದಲ್ಲಿ ನಡೆಯಿತು.

ಹಿಂದೂ ಜನ ಜಾಗೃತಿ ಸಮಿತಿ ರಾಜ್ಯ ಸಮನ್ವಯಕರು ಚಂದ್ರ ಮೊಗವೀರ್ ಮಾತನಾಡಿ, ನಕರಾತ್ಮಕ ವಿಚಾರಗಳನ್ನು ಸಕರಾತ್ಮವಾಗಿ ಮಾಡಬಲ್ಲ ಶಕ್ತಿ ದೇವಸ್ಥಾನಗಳಲ್ಲಿ ಇದೆ. ದೇವಸ್ಥಾನ ಗಳು ಸರ್ಕಾರೀಕರ ಆದ ಬಳಿಕ ಹುಂಡಿಯ ಹಣಗಳು ಯಾವುದಾವುದಕ್ಕೋ ದುರುಪಯೋಗ ಆಗುತ್ತಿದೆ. ಧಾರ್ಮಿಕ ವಿಚಾರಗಳು ನಾಶವಾಗುತ್ತಿದೆ. ದೇವಸ್ಥಾನಗಳ ರಕ್ಷಣೆ ಆಗಬೇಕು, ದೇವಸ್ಥಾನದ ಭೂಮಿ ಉಳಿಸಬೇಕು. ಎಲ್ಲಾ ದೇವಸ್ಥಾನದ ಸಂಪರ್ಕ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯ ನಡೆಯುತ್ತಿದೆ ಎಂದರು.

ವೇದಿಕೆಯಲ್ಲಿ ಸನಾತನ ಸಂತರಾದ ರಮಾನಂದ ಗೌಡ, ಮುಂಡಾಜೆ ಪರಶುರಾಮ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ನಾರಾಯಣ ಫದ್ಕೆ, ಬೆಳಾಲು ಅನಂತೋಡಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶರತ್ ಕೃಷ್ಣ ಪಡುವೇಟ್ನಾಯ, ಹಿಂದೂ ಜನ ಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕರು ವಿಜಯ ಕುಮಾರ್, ಸಾಂತಪ್ಪ ಗೌಡ, ಪ್ರಶಾಂತ್ ಶಬರಾಯ, ಸುಧಾಕರ ಅಮ್ಮಾಜೆ, ಜಯ ಸಾಲಿಯಾನ್, ಬಾಲಕೃಷ್ಣ ಗೌಡ, ಆನಂದ ಗೌಡ, ಶಿವಾನಂದ್ ರಾವ್ ಉಪಸ್ಥಿತರಿದ್ದರು.

ವಕೀಲರರಾದ ತೀರ್ಥಶ್ ನಿರೂಪಿಸಿದರು. ಅಕ್ಷಯ್ ರಾವ್ ವಂದಿಸಿದರು.

Related posts

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಡಳಿತ ಮಂಡಳಿಯ ಸೌಹಾರ್ದ ಸಭೆ ನಡೆದಿಲ್ಲ

Suddi Udaya

ಉಜಿರೆ ಎಸ್ ಡಿ.ಎಂ.ಕಾಲೇಜು ಎನ್.ಎಸ್.ಎಸ್. ಘಟಕಕ್ಕೆ ರಾಜ್ಯ ಪ್ರಶಸ್ತಿ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಅರ್ಹ ಫಲಾನುಭವಿಗಳಿಗೆ ನೀರಿನ ಡ್ರಮ್ ವಿತರಣೆ

Suddi Udaya

ಮಾಯಿಲಕೋಟೆ ದೈವಸ್ಥಾನಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಭೇಟಿ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವರಿಗೆ ಶ್ರೀಮತಿ ಸುಕನ್ಯಾ ಮತ್ತು ಡಿ. ಜಯರಾಮ ರಾವ್ ಮತ್ತು ಮಕ್ಕಳು ಸತ್ಯನಪಲ್ಕೆ ಕಲ್ಮಂಜ ಇವರಿಂದ ನೂತನ ಪುಷ್ಪರಥ ಸಮರ್ಪಣೆ ; ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ರಥಬೀದಿಯಿಂದ ಶ್ರೀ ಕ್ಷೇತ್ರ ಪಜಿರಡ್ಕಕ್ಕೆ ಭವ್ಯ ಶೋಭಾಯಾತ್ರೆ,

Suddi Udaya

ಎಸ್ ಡಿ ಎಂ ಬೆಳ್ತಂಗಡಿಯಲ್ಲಿ “ಪರಿಸರ ಸ್ನೇಹಿ ಸ್ಕೌಟ್ ಗಣಪತಿ ಆಚರಣೆ

Suddi Udaya
error: Content is protected !!