ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಗಾಂಧಿನಗರ ನಿವಾಸಿ ಲಕ್ಷ್ಮೀದಾಸ್(65ವ) ರವರು ಫೆ.14 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಬಳೆ ವ್ಯಾಪಾರಿ ಸಂಘದ ಹಿರಿಯ ಸದಸ್ಯರಾದ ಇವರು ಕಳೆದ ಹಲವಾರು ವರ್ಷಗಳಿಂದ ಜಾತ್ರೆ, ಸಂತೆಗಳಲ್ಲಿ ಬಳೆ ವ್ಯಾಪಾರವನ್ನು ನಡೆಸುತ್ತಾ ಎಲ್ಲರೊಂದಿಗೂ ಉತ್ತಮ ಭಾಂಧವ್ಯ ಹೊಂದಿದ್ದರು.ಕಳೆದ ಒಂದು ವಾರದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತರು ಮೂವರು ಮಕ್ಕಳಾದ ಜಗದೀಶ್ ದಾಸ್, ಹರೀಶ್ ದಾಸ್, ಭಾರತಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.