ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಬೊಳಿಯಾರುನಲ್ಲಿ ಕಾಡಾನೆಗಳು ಎಳೆದ ಮರ, ವಿದ್ಯುತ್ ಲೈನಿನ ಮೇಲೆ ಬಿದ್ದು ಕಂಬಗಳಿಗೆ ಹಾನಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪ ಉಜಿರೆ- ಪೆರಿಯಶಾಂತಿ ಬೊಳಿಯಾರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಡಾನೆಗಳು ಎಳೆದ ಮರವೊಂದು ವಿದ್ಯುತ್ ಲೈನಿನ ಮೇಲೆ ಬಿದ್ದ ಘಟನೆ ಫೆ.15ರಂದು ಬೆಳಗ್ಗಿನ ಜಾವ ಸಂಭವಿಸಿದೆ.


ಮರ ಧರ್ಮಸ್ಥಳ- ಶಿಶಿಲ 11 ಕೆ.ವಿ ವಿದ್ಯುತ್ ಲೈನಿನ ಮೇಲೆ ಬಿದ್ದಿದ್ದು ವಿದ್ಯುತ್ ಲೈನ್ ತುಂಡಾಗಿದೆ. ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ಇದರ ಸಮೀಪವೇ ಹಾದು ಹೋಗುವ ಸ್ಥಳೀಯ ಸಂಪರ್ಕ ನೀಡುವ ವಿದ್ಯುತ್ ಲೈನಿಗೂ ಹಾನಿ ಸಂಭವಿಸಿದೆ.


ಮೆಸ್ಕಾಂ ಇಲಾಖೆಯವರು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಮರವನ್ನು ತೆರವು ಗೊಳಿಸುವ ಕಾರ್ಯ ಮಾಡಿದ್ದು ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸುವ ಕಾಮಗಾರಿ ನಡೆಸುತ್ತಿದ್ದಾರೆ.

ಈ ಪರಿಸರದಲ್ಲಿ ಕಾಡಾನೆಗಳು ಆಗಾಗ ಓಡಾಟ ನಡೆಸುತ್ತಿದ್ದು ಹಿಂದೆ ಇಲ್ಲಿಯೇ ವಾಹನಗಳ ಮೇಲೆ ದಾಳಿ ನಡೆಸಿತ್ತು. ಧರ್ಮಸ್ಥಳ ಗ್ರಾಮದ ನೇರ್ತನೆ ಬೊಳಿಯಾರು, ಮುಳಿಕಾರು ಪರಿಸರದಲ್ಲಿ ಆಗಾಗ ವ್ಯಾಪಕ ಕೃಷಿ ಹಾನಿಯುಂಟುಮಾಡುತ್ತಿದೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಗುರುವಾಯನಕೆರೆ – ‘ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ-

Suddi Udaya

ಸ್ಪಂದನಾ ಸೇವಾ ಸಂಘದ ಯೋಜನೆಯಿಂದ ಚಿಕಿತ್ಸಾ ನೆರವು

Suddi Udaya

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ನಿಡ್ಲೆ ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಹಾಗೂ ಹಣ್ಣು ಹಂಪಲು ಸಸಿಗಳ ವಿತರಣೆ

Suddi Udaya

ನಡ ಗ್ರಾ.ಪಂ. ಉಪಾಧ್ಯಕ್ಷರಾಗಿ ಜಯ ಶೆಟ್ಟಿ ಬೊಲ್ಲೊಟ್ಟು ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!