ಮೊಗ್ರು :ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ–ಮುಗೇರಡ್ಕ, ಮೊಗ್ರು, ಬೆಳ್ತಂಗಡಿ ಇದರ 25 ನೇ ವರ್ಷದ ರಜತ ಪಥ 2025 ಕಾರ್ಯಕ್ರಮದ ಪ್ರಯುಕ್ತ ಅಲೆಕ್ಕಿ ಶ್ರೀರಾಮ ಶಿಶುಮಂದಿರ ಮೈದಾನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ವಿದ್ಯುತ್ ದೀಪಾಲಂಕೃತಗೊಂಡ ಭವ್ಯ ರಂಗಮಂಟಪದಲ್ಲಿ ಕೊಂಬು ವಾಳಗ, ಬ್ಯಾಂಡ್ ವಾದ್ಯ,ಸಿಡಿಮದ್ದು ಸದ್ದಿನೊಂದಿಗೆ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವು ಪ್ರದರ್ಶನಗೊಂಡಿತು .


ಈ ಸಂದರ್ಭದಲ್ಲಿ ದ.ಕ. ಲೋಕಸಭಾ ಕ್ಷೇತ್ರ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಯುವ ಉದ್ಯಮಿಗಳಾದ ಕಿರಣ್ ಚಂದ್ರ ಡಿ ಪುಷ್ಪಗಿರಿ ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ಬಾಲಕೃಷ್ಣ ಗೌಡ ಬಂದಾರು, ಹೊನ್ನಪ್ಪ ಕುಲಾಲ್ ಬಂದಾರು, ದುಗ್ಗಪ್ಪ ಯಾನೆ ರಾಜರಾಮ್ ಕುಲಾಲ್ ಬಂದಾರು, ರಾಷ್ಟಮಟ್ಟದ ಪ್ರತಿಭಾನ್ವಿತ ಕ್ರೀಡಾಪಟು ಅಭಿಶ್ರುತ್ ಮುರ ಇವರುಗಳಿಗೆ ಗೌರವಾರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ಯಕ್ಷಗಾನ ಬಯಲಾಟ ಸೇವಾಕರ್ತರಾದ ಶ್ರೀಮತಿ ಉಮ್ಮಕ್ಕ, ಶ್ರೀಮತಿ ಲೀಲಾವತಿ ಮತ್ತು ಪುರುಷೋತ್ತಮ ಗೌಡ,ಮಾ| ಮೀಲನ್, ಕು| ಯತಿದೇವಿ ಪುಣ್ಕೆತಡಿ ಮನೆ, ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ಉದಯ ಭಟ್ ಕೊಳಬ್ಬೆ, ಅಧ್ಯಕ್ಷರಾದ ರಮೇಶ್ ಗೌಡ ನೆಕ್ಕರಾಜೆ, ಕಾರ್ಯದರ್ಶಿ ನೇಮಿಚಂದ್ರ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರಾದ ಭರತೇಶ್ ಗೌಡ ಪುಣ್ಕೆದಡಿ, ಕಾರ್ಯದರ್ಶಿ ದೀಕ್ಷಿತ್ ಗೌಡ ಎರ್ಮಳ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಆಡಳಿತ ಮಂಡಳಿ , ಬೆಳ್ಳಿ ಹಬ್ಬ ಸಮಿತಿ, ಮಹಿಳಾ ಸಂಘ, ಮಾತೃ ಮಂಡಳಿ, ಮಾತಾಜಿಯವರು,ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.