ಬೆಳ್ತಂಗಡಿ: ಕುಂಬಾರರ ಸೇವಾ ಸಂಘ ಬೆಳ್ತಂಗಡಿ ಇದರ ವತಿಯಿಂದ ಆಯೋಜಿಸಿದ ಮಾಗಣೆಮಟ್ಟದ ಕ್ರೀಡಾಕೂಟ ಮಹಮ್ಮಾಯಿ ಟ್ರೋಫಿ-2025ರ 24 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳೆಯರ ಮುಕ್ತ ಹಗ್ಗ ಜಗ್ಗಾಟವು ಬೆಳ್ತಂಗಡಿಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯಿಂದ ಕಾಶ್ಮೀರದವರೆಗೆ ಪ್ರಯಾಣಿಸಿ, ದಕ್ಷಿಣದಿಂದ ಉತ್ತರ ಭಾರತಕ್ಕೆ ಅತ್ಯಂತ ವೇಗವಾಗಿ ಸೈಕಲ್ ಮೂಲಕ ಪ್ರಯಾಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಗಳಿಸಿದಕ್ಕಾಗಿ ಸಂಘದ ವತಿಯಿಂದ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.